ನವದೆಹಲಿ:ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ದೇಶದ್ರೋಹದ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದೆ. ವಸಾಹತುಶಾಹಿ ಕಾನೂನಿನಡಿಯಲ್ಲಿ ಬಂಧಿತರಾಗಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
ಶಾಂತಿಯುತ ಟೀಕಾಕಾರರ ವಿರುದ್ಧ ನಿರಂಕುಶ ಮತ್ತು ವ್ಯಾಪಕವಾಗಿ ಬಳಸಲಾದ ಈ ಕಾನೂನನ್ನು ಮರುಪರಿಶೀಲಿಸುವ ಭಾರತೀಯ ಸುಪ್ರೀಂಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಪ್ರಸ್ತುತ ಕಾನೂನಿನಡಿಯಲ್ಲಿ ಬಂಧಿತರಾಗಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂದಿದೆ.
ಇದನ್ನೂ ಓದಿ:'ದೇಶದ್ರೋಹ ಕಾನೂನು' ತಡೆಹಿಡಿದ ಸುಪ್ರೀಂಕೋರ್ಟ್; ಹೊಸ ಪ್ರಕರಣ ದಾಖಲಿಸದಂತೆ ಕೇಂದ್ರ, ರಾಜ್ಯಗಳಿಗೆ ಆದೇಶ
ಬುಧವಾರ, ಮಹತ್ವದ ಆದೇಶದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹ ಕಾನೂನನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿತು. ಹೀಗಾಗಿ ವಿವಾದಿತ ಕಾನೂನಿನ ಪುನರ್‌ವಿಮರ್ಶೆ ಆಗುವವರೆಗೂ ಈ ಕಾನೂನಿನಡಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಐತಿಹಾಸಿಕ ಆದೇಶ ನೀಡಿತು.
2014 ಮತ್ತು 2019 ರ ನಡುವೆ ದೇಶದ್ರೋಹದ ಕಾನೂನಿನಡಿ ದೇಶಾದ್ಯಂತ ಒಟ್ಟು 326 ಪ್ರಕರಣಗಳು ದಾಖಲಾಗಿದ್ದು, ಅತಿ ಹೆಚ್ಚು ಪ್ರಕರಣಗಳು ಅಸ್ಸಾಂನಲ್ಲಿ (54) ದಾಖಲಾಗಿವೆ. ಇದರಲ್ಲಿ ಕೇವಲ ಆರು ಮಂದಿಯನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.
ಇದನ್ನೂ ಓದಿ:ಎಸ್‌ಪಿ ದರ್ಜೆ ಅಧಿಕಾರಿಯಿಂದ 'ದೇಶದ್ರೋಹ' ಪ್ರಕರಣಗಳ ಮೇಲ್ವಿಚಾರಣೆ : ಸುಪ್ರೀಂಗೆ ಕೇಂದ್ರ ಮಾಹಿತಿ