ಕರ್ನಾಟಕ

karnataka

ETV Bharat / bharat

ಇದೇ ತಿಂಗಳ ಅಂತ್ಯಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ಸಾಧ್ಯತೆ - ಬೋರಿಸ್ ಜಾನ್ಸನ್ ಪ್ರವಾಸ ರದ್ದು

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೋರಿಸ್ ಜಾನ್ಸನ್ ಎರಡು ಬಾರಿ ತಮ್ಮ ಭಾರತಪ್ರವಾಸವನ್ನು ರದ್ದುಗೊಳಿಸಬೇಕಾಯಿತು. ಅವರು ಜನವರಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ಹಾಜರಾಗಬೇಕಿತ್ತು ಮತ್ತು ಏಪ್ರಿಲ್ 2021ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಬೇಕಿತ್ತು. ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅವರ ಪ್ರವಾಸ ರದ್ದಾಗಿತ್ತು..

uk-prime-minister-boris-johnson-expected-to-visit-india-in-end-of-the-april
ಇದೇ ತಿಂಗಳ ಅಂತ್ಯಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ಸಾಧ್ಯತೆ

By

Published : Apr 5, 2022, 11:49 AM IST

ನವದೆಹಲಿ :ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಏಪ್ರಿಲ್ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷವಷ್ಟೇ ಹಲವು ಬಾರಿ ಬೋರಿಸ್ ಜಾನ್ಸನ್ ಅವರ ಭೇಟಿ ರದ್ದಾಗಿತ್ತು. ಈಗ ಏಪ್ರಿಲ್ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಭಾರತ-ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವಾರವಷ್ಟೇ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಭಾರತಕ್ಕೆ ಭೇಟಿ ನೀಡಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಬೋರಿಸ್ ಜಾನ್ಸನ್ ಅವರ ರದ್ದುಗೊಂಡ ಪ್ರವಾಸಗಳು :ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೋರಿಸ್ ಜಾನ್ಸನ್ ಎರಡು ಬಾರಿ ತಮ್ಮಭಾರತಪ್ರವಾಸವನ್ನು ರದ್ದುಗೊಳಿಸಬೇಕಾಯಿತು. ಅವರು ಜನವರಿಯಲ್ಲಿ ಗಣರಾಜ್ಯೋತ್ಸವದ ಪರೇಡ್‌ಗೆ ಹಾಜರಾಗಬೇಕಿತ್ತು ಮತ್ತು ಏಪ್ರಿಲ್ 2021ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಬೇಕಿತ್ತು. ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅವರ ಪ್ರವಾಸ ರದ್ದಾಗಿತ್ತು.

ಕೋವಿಡ್ ಎರಡನೇ ಅಲೆಯ ಕಾರಣಕ್ಕಾಗಿಯೇ 2021ರ ಮೇ ತಿಂಗಳಿನಲ್ಲಿ ನಡೆದ ಜಿ7 ಶೃಂಗಸಭೆಗಾಗಿ ಪ್ರಧಾನಿ ಮೋದಿ ಅವರು ಯುಕೆ ಭೇಟಿಯನ್ನು ರದ್ದುಗೊಳಿಸಿದ್ದರು. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ ನಂತರ ಭೇಟಿಯಾಗಿದ್ದರು.

ಇದನ್ನೂ ಓದಿ:ಯುಕ್ರೇನ್‌ ಪೂರ್ವ, ದಕ್ಷಿಣಕ್ಕೆ ರಷ್ಯಾ ದಂಡಯಾತ್ರೆ ಸಾಧ್ಯತೆ: ಅಮೆರಿಕ ಎಚ್ಚರಿಕೆ

ABOUT THE AUTHOR

...view details