ಎರ್ನಾಕುಲಂ (ಕೇರಳ): ಭಾರಿ ಮಳೆಯಿಂದಾಗಿ ಎರಡು ಅಂತಸ್ತಿನ ಮನೆ ಸಂಪೂರ್ಣವಾಗಿ ಬಾಗಿದ್ದು, ಪಕ್ಕದ ಮನೆಯ ಮೇಲೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಭಾರೀ ಮಳೆಗೆ ಬಾಗಿದ ಮನೆ: ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
ದೇಶದ ದಕ್ಷಿಣ ಭಾಗದಲ್ಲಿರುವ ಕೇರಳ, ಕರ್ನಾಟಕ ಹಾಗೂ ಆಂಧ್ರ , ತೆಲಂಗಾಣದಲ್ಲಿ ಮಳೆ ಭಾರೀ ಅನಾಹುತ ಉಂಟುಮಾಡಿದೆ. ಕೇರಳದಲ್ಲಿ ಈ ಮಳೆಗೆ ಮನೆ ಬಾಗಿಕೊಂಡಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಮನೆ ಕೂನಮ್ತೈ ಬೀರಕುಟ್ಟಿ ರಸ್ತೆಯ ಹಮ್ಸಾದಲ್ಲಿದೆ. ಭಾರೀ ಶಬ್ದ ಕೇಳಿದ ನಂತರ ಮನೆ ಬಾಗಿರುವುದನ್ನು ಸ್ಥಳೀಯ ನಿವಾಸಿಗಳು ಗಮನಿಸಿದ್ದಾರೆ. ತಕ್ಷಣ ಎಚ್ಚೆತ್ತ ಜನರು ಮನೆಯಲ್ಲಿದ್ದವರನ್ನು ಸ್ಥಳಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಯೋಚಿತ ಸಹಾಯದಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅಧಿಕಾರಿಗಳು ಸ್ಥಳಕ್ಕೆ ತುಲುಪಿ ಕಾರ್ಯಾಚರಣೆಗೆ ಇಳಿಸಿದ್ದಾರೆ. ಇನ್ನು ಹತ್ತಿರದ ಮೂರು ಮನೆಗಳ ನಿವಾಸಿಗಳನ್ನು ಹತ್ತಿರದ ಅಂಗನವಾಡಿಗೆ ಸ್ಥಳಾಂತರಿಸಲಾಗಿದೆ. ಕುಸಿದ ಮನೆಯ ಅಡಿಪಾಯವನ್ನು ಕೆಂಪು ಮರಳುಗಲ್ಲಿನಿಂದ ಮಾಡಲಾಗಿದ್ದು, ಹಾನಿಗೊಳಗಾದ ಮನೆಯ ಎರಡನೇ ಮಹಡಿಯನ್ನು ಕೆಡವಲು ಪ್ರಯತ್ನಿಸಲಾಗುತ್ತಿದೆ.