ಅನಂತಪುರ (ಆಂಧ್ರಪ್ರದೇಶ):ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ (depression over Bay of Bengal) ಪರಿಣಾಮ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ (Flood in Andhra Pradesh). ವರುಣನ ಅವಾಂತರಕ್ಕೆ ನಿನ್ನೆಯೇ 14 ಮಂದಿ ಮೃತಪಟ್ಟಿದ್ದರು.
ಇಂದು ಅನಂತಪುರ ಜಿಲ್ಲೆಯಲ್ಲಿ ಎರಡು ಕಟ್ಟಡಗಳು ಕುಸಿದು (building collapse in Anantapur) ಇಬ್ಬರು ಪುಟಾಣಿಗಳು ಸೇರಿ ಮೂವರು ಮೃತಪಟ್ಟಿದ್ದಾರೆ. ಒಂದು ಕಟ್ಟಡ ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡದ ಮೇಲೆ ಉರುಳಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 15 ಮಂದಿಯಲ್ಲಿ ಆರು ಜನರನ್ನು ರಕ್ಷಿಸಿದ್ದಾರೆ.