ಕರ್ನಾಟಕ

karnataka

ETV Bharat / bharat

ಯೋಧರ ಮಧ್ಯೆ ಘರ್ಷಣೆ.. ಇಬ್ಬರು ಸೈನಿಕರಿಗೆ ಚಾಕು ಇರಿತ.. - ಜಾರ್ಖಂಡ್​ನಲ್ಲಿ ಚಾಕು ಇರಿತ

ಆರ್​ಪಿಎಫ್​​ ಮತ್ತು ಜಿಆರ್​ಪಿ ಸಿಬ್ಬಂದಿ ತಮ್ಮ ಸ್ವಗ್ರಾಮಗಳಿಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಏನಾಯಿತು ಎಂದು ತಿಳಿದಿಲ್ಲ. ಇದ್ದಕ್ಕಿದ್ದಂತೆ ಒಬ್ಬ ಯೋಧ, ಮತ್ತೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ..

Army jawans
Army jawans

By

Published : Aug 30, 2021, 6:57 PM IST

ರಾಮಗಢ (ಜಾರ್ಖಂಡ್) :ರಾಜಧಾನಿ ಎಕ್ಸ್‌ಪ್ರೆಸ್ ಪ್ಲಾಟ್‌ಫಾರ್ಮ್‌ಗೆ ಬರುತ್ತಿದ್ದ ವೇಳೆ ಬಾರ್ಕಕಾನಾ ರೈಲ್ವೆ ನಿಲ್ದಾಣದಲ್ಲಿ ಯೋಧರ ನಡುವೆ ಘರ್ಷಣೆ ಉಂಟಾಗಿದೆ. ಚಾಕು ಇರಿತದಿಂದ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಸೇನೆಯ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿ ಒಬ್ಬ ಜವಾನ, ಚಾಕುವಿನಿಂದ ಸಹಚರನ ಮೇಲೆ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಹೋದ ಮತ್ತೊಬ್ಬನಿಗೂ ಗಾಯವಾಗಿದೆ. ಸುಖ್​ ಸಾಗರ್ ಸಿಂಗ್ ಮತ್ತು ಯದುವೇಂದ್ರ ಸಿಂಗ್​​ರನ್ನು ಬರ್ಕಕಾನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯೋಧರ ಮಧ್ಯೆ ಘರ್ಷಣೆ.. ಇಬ್ಬರು ಸೈನಿಕರಿಗೆ ಚಾಕು ಇರಿತ..

ಆರ್​ಪಿಎಫ್​​ ಮತ್ತು ಜಿಆರ್​ಪಿ ಸಿಬ್ಬಂದಿ ತಮ್ಮ ಸ್ವಗ್ರಾಮಗಳಿಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಏನಾಯಿತು ಎಂದು ತಿಳಿದಿಲ್ಲ. ಇದ್ದಕ್ಕಿದ್ದಂತೆ ಒಬ್ಬ ಯೋಧ, ಮತ್ತೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: ಎಮ್ಮೆಯ ಮೃತದೇಹದ ಮೇಲೆ ಚಲಿಸಿದ ಆಟೋ.. ಐವರ ದುರ್ಮರಣ

ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ರಾಮಗಢ ಕಂಟೋನ್ಮೆಂಟ್​ನಲ್ಲಿರುವ ಸಿಖ್​ ರೆಜಿಮೆಂಟಲ್​ ಅಧಿಕಾರಿಗಳು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಈ ಗಲಾಟೆ ಯಾವ ಕಾರಣಕ್ಕಾಗಿ ನಡೆಯಿತು ಅನ್ನೋದ್ರ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

...view details