ಮಲಪ್ಪುರಂ(ಕೇರಳ): ಹೈದರಾಬಾದ್ನಿಂದ ಕೇರಳದ ಕೊಚ್ಚಿಗೆ ತೆರಳುತ್ತಿದ್ದ ಟ್ರಕ್ವೊಂದು ಮಲಪ್ಪುರಂ ಜಿಲ್ಲೆಯಲ್ಲಿ ಪಲ್ಟಿಯಾಗಿದೆ. ಸರಕು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಜಿಲ್ಲೆಯ ವಟ್ಟಪುರಂನ ತಿರುವಿನಲ್ಲಿ ಕಂದಕಕ್ಕೆ ಉರುಳಿ ಬಿದ್ದಿದೆ.
ಕಂದಕಕ್ಕೆ ಉರುಳಿ ಬಿದ್ದ Goods truck: ಭೀಕರ ಘಟನೆಯ ವಿಡಿಯೋ - Truck overturned Malapuram
ಕೇರಳದ ಮಲಪ್ಪುರಂನಲ್ಲಿ ಸರಕು ಸಾಗಣೆಯ ಟ್ರಕ್ ಕಂದಕಕ್ಕೆ ಉರುಳಿಬಿದ್ದು ಭಾರಿ ಅವಘಡ ಸಂಭವಿಸಿದೆ.

ಕಂದಕಕ್ಕೆ ಉರುಳಿದ ಸರಕು ಸಾಗಾಟದ ಟ್ರಕ್
ಘಟನೆಯಲ್ಲಿ ಟ್ರಕ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿಯಾಣ ಮೂಲದ ಅಶ್ಕರ್ ಗಾಯಗೊಂಡ ಲಾರಿ ಚಾಲಕ ಎಂದು ಗುರುತಿಸಲಾಗಿದೆ.
ಟ್ರಕ್ ಉರುಳಿ ಬಿದ್ದ ಭೀಕರ ದೃಶ್ಯ
ವಟ್ಟಪುರಂನ ಈ ತಿರುವಿನಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇರುತ್ತವೆ.