ಕರ್ನಾಟಕ

karnataka

ETV Bharat / bharat

ತ್ರಿಪುರದ ಬಿದಿರಿನ ಬಾಟಲ್‌ಗೆ ಆಧುನಿಕತೆಯ ಟಚ್​! ಹೆಚ್ಚಿದ ಬೇಡಿಕೆ

ಈ ಬಾಟಲಿಯನ್ನು ಬಿದಿರು ಮತ್ತು ಕಬ್ಬಿನ ಅಭಿವೃದ್ಧಿ ಸಂಸ್ಥೆಯಲ್ಲಿ (ಬಿಸಿಡಿಐ) ಈಶಾನ್ಯ ಕೇಂದ್ರದ ಆದೇಶದ ಮೇರೆಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಈ ಬಾಟಲ್​ಗೆ ಎಲ್ಲಾ ಕಡೆಯಿಂದ ಹೆಚ್ಚಿನ ಬೇಡಿಕೆ ನಿರ್ಮಾಣ ಆಗಿದೆ.

ತ್ರಿಪುರದ ಬಿದಿರಿನ ಬಾಟಲ್‌ಗೆ ಆಧುನಿಕತೆಯ ಟಚ್​ ! ಹೆಚ್ಚಿದ ಬೇಡಿಕೆ
ತ್ರಿಪುರದ ಬಿದಿರಿನ ಬಾಟಲ್‌ಗೆ ಆಧುನಿಕತೆಯ ಟಚ್​ ! ಹೆಚ್ಚಿದ ಬೇಡಿಕೆ

By

Published : Feb 18, 2022, 9:20 PM IST

Updated : Feb 18, 2022, 10:26 PM IST

ಅಗರ್ತಲಾ(ತ್ರಿಪುರಾ):ರಾಜ್ಯದಲ್ಲಿ ನೂತನವಾಗಿ ಬಿದಿರು ಬಾಟಲಿಯನ್ನು ತಯಾರಿಸುತ್ತಿರುವುದರಿಂದ ತ್ರಿಪುರಾ ಈಗ ರಾಷ್ಟ್ರವ್ಯಾಪಿ ಮೆಚ್ಚುಗೆ ಗಳಿಸುತ್ತಿದೆ. ಇದರ ಬೆನ್ನಲ್ಲೇ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅದರ ಗುಣಮಟ್ಟವನ್ನು ಸುಧಾರಿಸಲು ಹೆಚ್ಚಿನ ತಂತ್ರಜ್ಞಾನಗಳನ್ನು ಪರಿಚಯಿಸಿದೆ.

ಇನ್‌ಸ್ಟಿಟ್ಯೂಟ್ (ಬಿಸಿಡಿಐ) ತ್ರಿಪುರಾ ಮುಖ್ಯಸ್ಥ ಅಭಿನವ್ ಕಾಂತ್ ಈ ಸಂಬಂಧ ಮಾತನಾಡಿ, ಮೊದಲಿಗೆ ಬಾಟಲಿಗಳನ್ನು ಕೈಯಿಂದ ತಯಾರಿಸುವ ಕೆಲಸ ಮಾಡಲಾಗುತ್ತಿತ್ತು, ಬೇಡಿಕೆಯು ಬೆಳೆಯಲು ಪ್ರಾರಂಭಿಸಿರುವುದನ್ನು ನೋಡಿ ಉತ್ಪಾದಕತೆ ಹೆಚ್ಚಿಸುವ ಕೆಲವು ಯಂತ್ರಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.

ತ್ರಿಪುರದ ಬಿದಿರಿನ ಬಾಟಲ್‌ಗೆ ಆಧುನಿಕತೆಯ ಟಚ್​! ಹೆಚ್ಚಿದ ಬೇಡಿಕೆ

ಈ ಬಾಟಲಿಯನ್ನು ಬಿದಿರು ಮತ್ತು ಕಬ್ಬಿನ ಅಭಿವೃದ್ಧಿ ಸಂಸ್ಥೆಯಲ್ಲಿ (ಬಿಸಿಡಿಐ) ಈಶಾನ್ಯ ಕೇಂದ್ರದ ಆದೇಶದ ಮೇರೆಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಉತ್ಪಾದನೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಉತ್ಪನ್ನದ ಹೆಚ್ಚುತ್ತಿರುವ ಬೇಡಿಕೆಯನ್ನು ಸಮಯಕ್ಕೆ ಮತ್ತು ಶ್ರದ್ಧೆಯಿಂದ ಪೂರೈಸಬಹುದು ಎಂದು ಹೇಳಿದರು.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ರೈಲ್ವೆ ನೌಕರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ICAR, ISRO ಮುಂತಾದ ಕೇಂದ್ರ ಸರ್ಕಾರಿ ಸಂಸ್ಥೆಗಳು ಈ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇಡುತ್ತಿವೆ. ಬಿದಿರಿನ ಬಾಟಲಿಯನ್ನು ಮೊದಲ ಬಾರಿಗೆ ಜನವರಿ 2020 ರಲ್ಲಿ ಬಿಡುಗಡೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

Last Updated : Feb 18, 2022, 10:26 PM IST

For All Latest Updates

TAGGED:

ABOUT THE AUTHOR

...view details