ಕರ್ನಾಟಕ

karnataka

ಚುನಾವಣಾ ಬಹಿಷ್ಕಾರ ಹಿಂಪಡೆದ ಛತ್ತೀಸ್​ಗಢದ ಬುಡಕಟ್ಟು ಜನಾಂಗ

By ETV Bharat Karnataka Team

Published : Oct 14, 2023, 10:07 AM IST

ಸ್ವೀಪ್​(SVEEP) ತಂಡ ಬುಡಕಟ್ಟು ನಿವಾಸಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ, ನಿರ್ಧಾರ ಹಿಂಪಡೆಯುವಂತೆ ಮಾಡಿದೆ.

Tribals of Chhattisgarh withdraw election boycott Decision
ಚುನಾವಣಾ ಬಹಿಷ್ಕಾರ ಹಿಂಪಡೆದ ಛತ್ತೀಸ್​ಗಢದ ಬುಡಕಟ್ಟು ಜನಾಂಗ

ಕೊರ್ಬಾ(ಛತ್ತೀಸ್​ಗಢ): ಮುಂಬರುವ ಛತ್ತೀಸ್​ಗಢ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದ ಕೊರ್ಬಾ ಜಿಲ್ಲೆಯ ಎರಡು ಬುಡಕಟ್ಟು ಗ್ರಾಮಗಳ ನಿವಾಸಿಗಳು, ಸ್ವೀಪ್​ ತಂಡ ಮಧ್ಯಪ್ರವೇಶಿಸಿದ ನಂತರ ಇದೀಗ ಗ್ರಾಮಸ್ಥರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಾರೆ.

ಆಡಳಿತ ಮತ್ತು ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಗ್ರಾಮಗಳಲ್ಲಿ ಕುಡಿಯುವ ನೀರು, ವಿದ್ಯುತ್​ ಸರಬರಾಜು ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯನ್ನು ಮುಂದಿಟ್ಟು ಎರಡು ಬುಡಕಟ್ಟು ಗ್ರಾಮಗಳ ನಿವಾಸಿಗಳು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಅಧಿಕಾರಿಗಳು ಮತದಾನದ ಮಹತ್ವದ ಬಗ್ಗೆ ಅವರ ಮತಗಳಿಂದ ಮಾತ್ರ ಅವರ ಹಳ್ಳಿಗಳಲ್ಲಿ ಬದಲಾವಣೆ ತರಬಹುದು ಎನ್ನುವ ಅರಿವು ಮೂಡಿಸಿದ್ದು, ಬುಡಕಟ್ಟು ನಿವಾಸಿಗಳು ತಮ್ಮ ನಿರ್ಧಾರವನ್ನು ಕೈಬಿಡುವಂತೆ ಮಾಡಿದ್ದಾರೆ.

ಸ್ವೀಪ್​ (SVEEP- Systematic Voters' Education and Electoral Participation) ತಂಡ, ಪಹಾಡಿ ಕೊರ್ವಾ ಬುಡಕಟ್ಟು ಗುಂಪು ವಾಸಿಸುವ ಸಾರ್ದಿಹ್​ ಹಾಗೂ ಬಿಗ್ಧರಿದಂಡ್​ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಚುನಾವಣೆ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸಿದ್ದಾರೆ. ಈ ಎರಡು ಗ್ರಾಮಗಳು ರಾಂಪುರ ವಿಧಾನಸಭಾ ಕ್ಷೇತ್ರದ ಕೆರಕಚಾರ್​ ಗ್ರಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ.

ಛತ್ತೀಸ್​ಗಢದಲ್ಲಿ ನವೆಂಬರ್​ 7 ಹಾಗೂ 17ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನವೆಂಬರ್​ 7 ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ನವೆಂಬರ್​ 17ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಈ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

ಮತದಾರರ ಜಾಗೃತಿ ತಂಡದ ಉಸ್ತುವಾರಿ ಅನಿಲ್​ ರಾತ್ರೆ ಮಾತನಾಡಿ, ಸ್ವೀಪ್​ ತಂಡಗಳು ಎರಡು ಬುಟಕಟ್ಟು ಗ್ರಾಮಗಳಿಗೆ ತೆರಳಿ, ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ನಿವಾಸಿಗಳಿಗೆ ಮತದಾನ ಮಹತ್ವದ ಬಗ್ಗೆ ಅರಿವು ಮೂಡಿಸಿವೆ. ಅದಷ್ಟೇ ಅಲ್ಲದೆ ನಮ್ಮ ಸ್ವೀಪ್​ ತಂಡಗಳು ದೂರದ ಹಳ್ಳಿ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಛಟಸಾರೈ, ಕದಮ್‌ಝರಿಯಾ, ಹರ್ದಿಮೌಹಾ, ಜಂಭಂತ ಮತ್ತು ಸೋನಾರಿ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಸಹ ಆಯೋಜಿಸಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಪ್ರೇರೇಪಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಬುಡಕಟ್ಟು ಗ್ರಾಮಗಳಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲದ ಕಾರಣ ತಾವು ಮತದಾನ ಮಾಡುವುದಿಲ್ಲ ಎಂದು ಹೇಳಿ, ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು. ರಾಷ್ಟ್ರಪತಿಗಳ ದತ್ತು ಪಡೆದ ಮಕ್ಕಳು ಎಂದು ಪರಿಗಣಿಸಲ್ಪಟ್ಟ ಪಹಾಡಿ ಕೊರ್ವಾ ಬುಡಕಟ್ಟು ಜನರು, ತಮ್ಮ ಗ್ರಾಮದ ಅಗತ್ಯಗಳ ಬಗ್ಗೆ ಆಡಳಿತ ಕಡೆಗಣಿಸಿದೆ ಎಂದು ಭಾವಿಸಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದವು.

ಇದನ್ನೂ ಓದಿ:ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ... ಛತ್ತೀಸ್​ಗಢದಲ್ಲಿ 2ಹಂತದ ವೋಟಿಂಗ್​.. ಡಿಸೆಂಬರ್ 3ಕ್ಕೆ ಚುನಾವಣಾ ಫಲಿತಾಂಶ ಪ್ರಕಟ

ABOUT THE AUTHOR

...view details