ಸಿವಾನ್(ಬಿಹಾರ): ಚಿನ್ನಾಭರಣ, ಹಣ ಮತ್ತು ಇತರೆ ಬೆಲೆಬಾಳುವ ವಸ್ತುಗಳ ಕಳ್ಳತನದ ಬಗ್ಗೆ ಕೇಳಿದ್ದೇವೆ. ಆದರೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಕಳ್ಳರು ಟ್ರಾನ್ಸ್‌ಫಾರ್ಮರ್‌ಗಳನ್ನೇ ಕದ್ದಿದ್ದಾರೆ. ಜಿಲ್ಲೆಯ ರಘುನಾಥಪುರದಲ್ಲಿ ಘಟನೆ ನಡೆದಿದೆ.
ಇಲ್ಲಿ ಐದು ಟ್ರಾನ್ಸ್‌ಫಾರ್ಮರ್‌ಗಳು ಕಳುವಾಗಿವೆ. ಇದರಿಂದ ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ರಘುನಾಥಪುರ ಪಂಚಾಯಿತಿಯ ವಾರ್ಡ್ ನಂ.12 ಮತ್ತು 14ರಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಟ್ರಾನ್ಸ್‌ಫಾರ್ಮರ್ ಕಳ್ಳತನವಾಗಿದೆ.