ಕರ್ನಾಟಕ

karnataka

ETV Bharat / bharat

ಟೋಕಿಯೋ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ: ಭಾರತ ಮುನ್ನಡೆಸಿದ ಮೇರಿ ಕೋಮ್​- ಮನ್​ಪ್ರೀತ್ - Mary Kom, Manpreet Singh lead Indian

ಟೋಕಿಯೋ ಒಲಿಂಪಿಕ್ಸ್​ಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಅತಿ ದೊಡ್ಡ ಕ್ರೀಡಾಕೂಟದಲ್ಲಿ ಸಾವಿರಾರು ಕ್ರೀಡಾಪಟುಗಳು ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

Tokyo Olympics Opening Ceremony
Tokyo Olympics Opening Ceremony

By

Published : Jul 23, 2021, 5:52 PM IST

Updated : Jul 23, 2021, 7:36 PM IST

ಟೋಕಿಯೋ(ಜಪಾನ್​): ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಒಂದು ವರ್ಷ ತಡವಾಗಿ ಆರಂಭಗೊಂಡಿರುವ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ (ಜಪಾನ್ ಕಾಲಮಾನ ರಾತ್ರಿ 9.15ಕ್ಕೆ) ಅಧಿಕೃತ ಚಾಲನೆ ದೊರೆತಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಜಪಾನ್‌ ರಾಜಧಾನಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಎಲ್ಲ ದೇಶದ ಆಟಗಾರರು ಧ್ವಜ ಹಿಡಿದು ಸಾಗಿದರು. ಭಾರತದ ಪರ ಬಾಕ್ಸಿಂಗ್​ ತಾರೆ ಮೇರಿ ಕೋಮ್​ ಹಾಗೂ ಹಾಕಿ ತಂಡದ ಕ್ಯಾಪ್ಟನ್​ ಮನ್‌ಪ್ರೀತ್​ ಭಾರತದ ಧ್ವಜ ಹಿಡಿದುಕೊಂಡಿದ್ದರು. ಈ ವೇಳೆ ಪ್ರತಿ ದೇಶದಿಂದ 30 ಅಥ್ಲೀಟ್ಸ್‌ಗೆ ಮಾತ್ರ ಸಮಾರಂಭದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗಿತ್ತು.

ಉಳಿದಂತೆ ಗ್ರೀಕ್​, ಅರ್ಜೆಂಟಿನಾ, ಜಪಾನ್​, ಚೀನಾ ಸೇರಿದಂತೆ ಅನೇಕ ದೇಶಗಳ ಕ್ರೀಡಾಳುಗಳು ತಮ್ಮ ತಮ್ಮ ದೇಶದ ಧ್ವಜ ಹಿಡಿದುಕೊಂಡು ಸಾಗಿದರು. ಕೊರೊನಾ ವೈರಸ್​ ಕಾರಣ, ಈ ಹಿಂದಿನಂತೆ ಈ ಸಲ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ.

Last Updated : Jul 23, 2021, 7:36 PM IST

ABOUT THE AUTHOR

...view details