ಕರ್ನಾಟಕ

karnataka

ತೃಣಮೂಲ ಕಾಂಗ್ರೆಸ್​ - ಯುನೈಟೆಡ್​ ಫ್ರಂಟ್​ ನಡುವೆ ಘರ್ಷಣೆ: ಟಿಎಂಸಿ ಕಾರ್ಯಕರ್ತ ಸಾವು

By

Published : Mar 25, 2021, 12:00 PM IST

ನಿನ್ನೆ ರಾತ್ರಿ ತೃಣಮೂಲ ಕಾಂಗ್ರೆಸ್​ ಮತ್ತು ಯುನೈಟೆಡ್​ ಫ್ರಂಟ್ ಪಕ್ಷಗಳ ನಡುವೆ ನೆಡದ ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತ ಮೃತಪಟ್ಟಿದ್ದು, ಎರಡೂ ಪಕ್ಷಗಳ 10ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ.

TMC worker killed after clash between TMC and United Front at Baruipur
ಟಿಎಂಸಿ ಕಾರ್ಯಕರ್ತ ಸಾವು

ದಕ್ಷಿಣ 24 ಪರಗಣ (ಪಶ್ಚಿಮ ಬಂಗಾಳ): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮುಂದುವರೆದಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ ತೃಣಮೂಲ ಕಾಂಗ್ರೆಸ್​ ಮತ್ತು ಯುನೈಟೆಡ್​ ಫ್ರಂಟ್ ಪಕ್ಷಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಟಿಎಂಸಿ ಕಾರ್ಯಕರ್ತ ಮೃತಪಟ್ಟಿದ್ದಾನೆ.

ಕಳೆದ ರಾತ್ರಿ ನಡೆದ ಘಟನೆಯಲ್ಲಿ ಎರಡೂ ಪಕ್ಷಗಳ 10ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದು, ಯುನೈಟೆಡ್​ ಫ್ರಂಟ್​ನ ಮೂವರು ಕಾಣೆಯಾಗಿದ್ದಾರೆ. ನಮ್ಮವರ ಮೇಲೆ ಯುನೈಟೆಡ್ ಫ್ರಂಟ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಟಿಎಂಸಿ ಆರೋಪಿಸಿದರೆ, ನಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂದು ಯುನೈಟೆಡ್ ಫ್ರಂಟ್ ಆರೋಪಿಸಿದೆ.

ಇದನ್ನೂ ಓದಿ: ಬಂಗಾಳದಲ್ಲಿ 'ವ್ಹೀಲ್​ಚೇರ್ ಸರ್ಕಾರ' ಕೆಲಸ ಮಾಡಲ್ಲ: ದೀದಿಗೆ ದಿಲೀಪ್ ಘೋಷ್ ಟಾಂಗ್​

ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಮಾರ್ಚ್ 27 ರಿಂದ ಏಪ್ರಿಲ್ 29ರ ವರೆಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ABOUT THE AUTHOR

...view details