ಕರ್ನಾಟಕ

karnataka

ETV Bharat / bharat

ಗೋಧಿಗೆ ಬೆಂಬಲ ಬೆಲೆ ಘೋಷಿಸಿದ ಹರಿಯಾಣ ಸರ್ಕಾರ: ರಾಕೇಶ್​ ಟಿಕಾಯತ್​ ಅಸಮಾಧಾನ! - ಕನಿಷ್ಠ ಬೆಂಬಲ ಬೆಲೆ

ಹರಿಯಾಣ ಸರ್ಕಾರ ಏಪ್ರಿಲ್ 1 ರಿಂದ ಕನಿಷ್ಠ ಬೆಂಬಲ ಬೆಲೆಗೆ ಗೋಧಿ ಸೇರಿದಂತೆ ಆರು ಬೆಳೆಗಳನ್ನು ಖರೀದಿಸುವ ದಿನಾಂಕಗಳ ಘೋಷಣೆ ಮಾಡಲಿದೆ.

Haryana
ರಾಕೇಶ್​ ಟಿಕಾಯತ್​

By

Published : Mar 26, 2021, 6:37 AM IST

ಕರ್ನಾಲ್ (ಹರಿಯಾಣ): ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗಳ ಬಗ್ಗೆ ಹಲವಾರು ರಾಜ್ಯಗಳ ರೈತರು ಇನ್ನೂ ಅಚಲವಾಗಿದ್ದರೆ, ಇತ್ತ ಹರಿಯಾಣ ಸರ್ಕಾರ ಏಪ್ರಿಲ್ 1ರಿಂದ ಕನಿಷ್ಠ ಬೆಂಬಲ ಬೆಲೆಗೆ ಗೋಧಿ ಸೇರಿದಂತೆ ಆರು ಬೆಳೆಗಳನ್ನು ಖರೀದಿಸುವ ದಿನಾಂಕಗಳ ಬಗ್ಗೆ ಮಾಹಿತಿ ನೀಡಿದೆ.

ಈ ಪ್ರಕಟಣೆಯ ನಂತರ ಬಿಕೆಯು ಮುಖಂಡ ರಾಕೇಶ್ ಟಿಕಾಯತ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸರ್ಕಾರವು ನೇರವಾಗಿ ರೈತರ ಖಾತೆಗೆ ಹಣವನ್ನು ಹಾಕುವುದು ದೊಡ್ಡ ವಿಷಯವೇನೂ ಅಲ್ಲ. ಆದರೆ ನಾವು ಕೃಷಿ ಕಾನೂನುಗಳನ್ನು ಬೆಂಬಲಿಸುತ್ತಿಲ್ಲ. ಗೋಧಿ ಸಂಗ್ರಹ ಮಾಡುವ ಸರ್ಕಾರದ ನಿರ್ಧಾರಕ್ಕೆ ನನ್ನ ಅಸಮಾಧಾನವಿದೆ. ರೈತರ ಆಂದೋಲನವು ಭಾರತದಾದ್ಯಂತ ಬೆಂಬಲವನ್ನು ಪಡೆಯುತ್ತಿದೆ" ಎಂದಿದ್ದಾರೆ.

ಇದನ್ನು ಓದಿ: ಮೋದಿ ಬಾಂಗ್ಲಾ ಪ್ರವಾಸ... ಮದುವಣಗಿತ್ತಿಯಂತೆ ಶೃಂಗಾರಗೊಂಡ ಢಾಕಾ!

ಇನ್ನು ಡಿಸಿಎಂ ದುಶ್ಯಂತ್​ ಚೌಟಲಾ ಈ ಬಗ್ಗೆ ಮಾತನಾಡಿದ್ದು, "ಈ ಬಾರಿ ಪಾವತಿ ಏಜೆಂಟರಿಗೆ ಹೋಗುವುದಿಲ್ಲ. ಹಣ ನೇರವಾಗಿ ರೈತರ ಖಾತೆಗೆ ಪಾವತಿಯಾಗುತ್ತದೆ" ಎಂದಿದ್ದಾರೆ.

ABOUT THE AUTHOR

...view details