ರಾಂಚಿ(ಜಾರ್ಖಂಡ್):ಮಾಟ ಮಂತ್ರ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ಜಾರ್ಖಂಡ್ನಲ್ಲಿ ಮೂವರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ನಡೆದಿದೆ. ಎರಡು ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಇನ್ನೊಂದು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ನಡೆದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಹರೆ ಹಾಕಲಾಗಿದೆ.
ರಾಜಧಾನಿ ರಾಂಚಿಯಿಂದ 60 ಕಿ.ಮೀ ದೂರದಲ್ಲಿರುವ ರಣದಿಹ್ ಎಂಬ ಗ್ರಾಮದಲ್ಲಿ ಈ ಬರ್ಬರ ಹತ್ಯಾಕಾಂಡ ನಡೆದಿದೆ. ಮೂವರನ್ನೂ ಯಕ್ಷಿಣಿ ವಿದ್ಯೆ ಕಲಿತವರು ಎಂದು ಶಂಕಿಸಿ ಯಾರೋ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ತಪಾಸಣೆ ನಡೆಸಿದ್ದಾರೆ. ಮೂವರಲ್ಲಿ ಇಬ್ಬರ ಶವಗಳನ್ನು ಪತ್ತೆ ಮಾಡಲಾಗಿದೆ. ಇನ್ನೊಂದು ಶವದ ಪತ್ತೆ ಕಾರ್ಯ ನಡೆದಿದೆ.