ನವದೆಹಲಿ: ಮೂರು ಕೃಷಿ ಕಾನೂನುಗಳನ್ನು (Three farm laws) ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ಮುಂಬರುವ ಚುನಾವಣೆಯಲ್ಲಿ ಸೋಲು ಅನುಭವಿಸುವ ಸುಳಿವು ಅರಿತು ಇದ್ದಕ್ಕಿದ್ದಂತೆ ದೇಶದ ವಾಸ್ತವವನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Congress leader Priyanka Gandhi Vadra) ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಹರಿಹಾಯ್ದಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು (Three farm laws) ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ ನಂತರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ನರೇಂದ್ರ ಮೋದಿ ಜೀ, ಪ್ರತಿಭಟನೆ ವೇಳೆ 600 ರೈತರು ಹುತಾತ್ಮರಾದರು, 350 ದಿನಗಳಿಗಿಂತ ಹೆಚ್ಚು ದಿನ ಹೋರಾಟ, ನಿಮ್ಮ ಸಚಿವರ ಮಗ ರೈತರನ್ನು ತುಳಿದು ಸಾಯಿಸಿದರೂ ಸಹ ನೀವು ಕಾಳಜಿ ವಹಿಸಲಿಲ್ಲ. ನಿಮ್ಮ ಪಕ್ಷದ ನಾಯಕರು ರೈತರನ್ನು ಅವಮಾನಿಸಿದ್ದಾರೆ. ಅವರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಗೂಂಡಾಗಳು, ದುಷ್ಕರ್ಮಿಗಳು ಎಂದು ಕರೆದಿದ್ದಾರೆ. ನೀವೇ ಅವರನ್ನು 'ಆಂದೋಲನಜೀವಿ' ಎಂದು ಕರೆದಿದ್ದೀರಿ. ಲಾಠಿಯಿಂದ ಹೊಡೆದಿದ್ದೀರಿ. ಅವರನ್ನು ಬಂಧಿಸಿದ್ದೀರಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Congress General Secretary Priyanka Gandhi) ಟೀಕಿಸಿದ್ದಾರೆ.