ಶ್ರೀನಗರ: ಉದ್ದೇಶಿತ ಹತ್ಯೆಗಳಲ್ಲಿ ನಾಗರಿಕರನ್ನು ಕೊಲ್ಲುವವರನ್ನು ಭದ್ರತಾ ಪಡೆಗಳು ಮತ್ತು ಆಡಳಿತವು ಬಿಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಎಚ್ಚರಿಕೆ ನೀಡಿದ್ದಾರೆ. ಕಾಶ್ಮೀರದಲ್ಲಿ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಿನ್ಹಾ ಹೇಳಿದ್ದಾರೆ.
ಪಿಎಂ ಪ್ಯಾಕೇಜ್ ಉದ್ಯೋಗಿ ಮತ್ತು ಜಮ್ಮುವಿನ ಮಹಿಳಾ ಶಿಕ್ಷಕಿ ಸೇರಿದಂತೆ 17 ನಾಗರಿಕರು ಕಳೆದ ತಿಂಗಳುಗಳಲ್ಲಿ ಕೊಲ್ಲಲ್ಪಟ್ಟರು. ಇದು ಪಿಎಂ ಪ್ಯಾಕೇಜ್ ಮತ್ತು ಜಮ್ಮು ಮೂಲದ ಉದ್ಯೋಗಿಗಳಲ್ಲಿ ಭಾರೀ ಭಯವನ್ನು ಸೃಷ್ಟಿಸಿದೆ. ಹತ್ಯೆಗಳ ನಂತರ ಉದ್ಯೋಗಿಗಳ ಸುರಕ್ಷತೆಗಾಗಿ ಪಟ್ಟಣಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಿಯೋಜಿಸಿದೆ.