ವಾಷಿಂಗ್ಟನ್ :ಅಮೆರಿಕದ ಡೇನಿಯಲ್ ಬ್ರೌನಿಂಗ್ ಸ್ಮಿತ್ ಅವರನ್ನು ‘ರಬ್ಬರ್ ಬಾಯ್’ ಎಂದೇ ಖ್ಯಾತಿ ಗಳಿಸಿದ್ದಾನೆ. ಏಕೆಂದರೆ, ಡೇನಿಯಲ್ ತನ್ನ ದೇಹವನ್ನು ಬಿಲ್ಲಿನಂತೆ ಬಗ್ಗಿಸಬಲ್ಲನು. ಅದಷ್ಟೇ ಅಲ್ಲ, ಇಡೀ ದೇಹವನ್ನು ಮಡಚಿ ಪೆಟ್ಟಿಗೆಯೊಳಗೆ ಹೋಗಿಸಿತ್ತಾನೆ. ಡೇನಿಯಲ್ನ ಈ ಎಲ್ಲ ಕೌಶಲ್ಯಗಳೊಂದಿಗೆ ಪ್ರತಿಯೊಬ್ಬರ ಗಮನ ಸೆಳೆದಿದ್ದಾನೆ. ಈ ಮನ್ನಣೆಯಿಂದಲೇ ಅವರು ಅನೇಕ ಜಾಹೀರಾತುಗಳು, ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದರು.
ಈ ಡೇನಿಯಲ್ ಯಾರು ಗೊತ್ತಾ?: ಡೇನಿಯಲ್ ಅಮೆರಿಕಾದ ಮೆರಿಡಿಯನ್ನಲ್ಲಿ ಜನಿಸಿದರು. ಅವರಿಗೆ ಒಬ್ಬ ಸಹೋದರಿ ಮತ್ತು ಸಹೋದರ ಇವರಿಗಿದ್ದಾರೆ. ಡೇನಿಯಲ್ ಅವರು ಚಿಕ್ಕ ಮಗುವಾಗಿದ್ದಾಗ ಬಹಳ ಎತ್ತರದಿಂದ ನೆಲಕ್ಕೆ ಜಿಗಿಯುತ್ತಿದ್ದರು. ಆದರೆ, ಅವನಿಗೆ ಏನೂ ಆಗರಲಿಲ್ಲ. ಮನೆಯವರೆಲ್ಲ ಅದರ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದರು. ಅವರ ಹೆತ್ತವರು ತಮ್ಮ ಮಗುವಿಗೆ 'ಕಾಂಟೊರ್ಟಿಸ್ಟ್' ಆಗಿ ಉಜ್ವಲ ಭವಿಷ್ಯವಿದೆ ಎಂದು ಭಾವಿಸಿದ್ದರು. ಇದರರ್ಥ ಸರ್ಕಸ್ ಕ್ಷೇತ್ರದಲ್ಲಿ ಸಾಧನೆ ಮಾಡುವ ವ್ಯಕ್ತಿಯಾಗಬಹುದು ಎಂದುಕೊಂಡಿದ್ದರು.
ಯುವಕನಾಗಿದ್ದಾಗ, ಡೇನಿಯಲ್ ಬೀದಿಗಳಲ್ಲಿ ಪ್ರದರ್ಶನ ನೀಡಿದರು. ಅದು ಸರ್ಕಸ್ ಪ್ರದರ್ಶನದಲ್ಲಿ ಅವಕಾಶ ಲಭಿಸಲು ಕಾರಣವಾಯಿತು. ಅವರು ತಮ್ಮ ತರಬೇತಿ ಮುಂದುವರಿಸಲು, ಸ್ಯಾನ್ ಫ್ರಾನ್ಸಿಸ್ಕೋ ಶಾಲೆಯಲ್ಲಿ ಮಾಸ್ಟರ್ ಲೂಯಿ ಅವರನ್ನು ತಲುಪಿದರು. ಕೆಲವು ದಿನಗಳ ನಂತರ, ಡೇನಿಯಲ್ ತನ್ನ ದೇಹವನ್ನು ಆಶ್ಚರ್ಯಕರ ರೀತಿಯಲ್ಲಿ ತಿರುಗಿಸುವುದರಲ್ಲಿ ನಿಪುಣರಾದರು. ಈಗಾಗಲೇ ಅನೇಕ 'ಕಂಟಾರ್ಷನಿಸ್ಟ್'ಗಳು ಸಾಹಸಗಳನ್ನು ಮಾಡುತ್ತಿದ್ದರೂ, ಡೇನಿಯಲ್ ಶೈಲಿಯು ಮಾತ್ರ ತುಂಬಾ ವಿಶಿಷ್ಟವಾಗಿತ್ತು. ಅವರು ವೇಗವಾಗಿ ಮತ್ತು ವಿಭಿನ್ನವಾಗಿ ಚಲಿಸುವುದರಲ್ಲಿ ವಿಶೇಷ ಛಾಪು ಮೂಡಿಸುತ್ತಿದ್ದರು.
ಡೇನಿಯಲ್ ಹೆಸರಿನಲ್ಲಿವೆ 7 ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್:ಡೇನಿಯಲ್ ಅವರ ವಿಶಿಷ್ಟ ಶೈಲಿ ಕಂಡು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅವರನ್ನು 1999ರಲ್ಲಿ 'ಬಾಕ್ಸ್‌ನಲ್ಲಿ ಅತಿ ಹೆಚ್ಚಿನ ಕಂಟೋರ್ಷನಿಸ್ಟ್' ಎಂದು ಗುರುತಿಸಿತು. ಆ ಸಾಹಸ ಒಂದು ಪೆಟ್ಟಿಗೆಯಲ್ಲಿ ಅವರು ತಮ್ಮನ್ನು ತಾವು 180 ಡಿಗ್ರಿ ಕೋನದಲ್ಲಿ ಬಗ್ಗಿಸಿ. ತನ್ನ ಕೈ ಮತ್ತು ಕಾಲುಗಳನ್ನು ಮಡಚಿ ತನ್ನನ್ನು ತಾನೇ ಆ ಪೆಟ್ಟಿಗೆಯಲ್ಲಿ ಇರಿಸಿಕೊಂಡನು. 2007ರಲ್ಲಿ ಅವರು 'ಮೋಸ್ಟ್ ಫ್ಲೆಕ್ಸಿಬಲ್ ಮ್ಯಾನ್' ಎಂಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗೆ ಪಾತ್ರರಾದರು. ಈಗಾಗಲೇ ಅವರ ಹೆಸರಿನಲ್ಲಿ ಏಳು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ದಾಖಲೆಗಳಿವೆ. ಅಂದಿನಿಂದ, ಡೇನಿಯಲ್ ಅನೇಕ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ನಟಿಸಲು ಅವಕಾಶಗಳನ್ನು ಪಡೆದರು. ಅವರು ಅನೇಕ ಕಾಲೇಜುಗಳು ಮತ್ತು ಸಂಗೀತ ಕಚೇರಿಗಳ ಹೊರಗೆ ಪ್ರದರ್ಶನ ನೀಡುತ್ತಿದ್ದರು. ಅದು ಡೇನಿಯಲ್ಗೆ ‘ರಬ್ಬರ್ ಬಾಯ್’ ಎಂಬ ಅಪರೂಪದ ಮನ್ನಣೆಯನ್ನು ತಂದು ಕೊಟ್ಟಿತು.
ದೋಷವೇ ವರವಾಗಿದ್ದು ಹೇಗೆ?:ಡೇನಿಯಲ್ ತನ್ನ ದೇಹವನ್ನು ವಿವಿಧ ರೀತಿಯಲ್ಲಿ ಬಾಗಿಸುವುದಕ್ಕೆ ಕಾರಣ ಏನಂದರೆ, ಎಹ್ಲರ್ಸ್ ಡ್ಯಾನ್ಲೋಸ್ ಸಿಂಡ್ರೋಮ್. ಈ ರೋಗವು ಆನುವಂಶಿಕ ದೋಷದಿಂದ ಹರಡುತ್ತದೆ. ಎಹ್ಲರ್ಸ್ ಡ್ಯಾನ್ಲೋಸ್ ಸಿಂಡ್ರೋಮ್ನಲ್ಲಿ 13 ವಿಧಗಳಿವೆ. ಈ ಕಾಯಿಲೆಗೆ ಒಳಗಾದವರ ದೇಹದಲ್ಲಿನ ಕೀಲುಗಳು ಯಾವುದೇ ಆದ್ರೂ ಕೂಡಾ ಬಾಗುಸಬಹುದು ಹಾಗೂ ತಿರುಗಿಲೂಬಹುದು. ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಸಣ್ಣ ಪೆಟ್ಟು ಬಿದ್ದರೂ ಗಾಯ ದೊಡ್ಡದಾಗುತ್ತದೆ. ಅನೇಕ ಸೋಂಕಿತರು ತೀವ್ರವಾದ ಸ್ನಾಯು ಮತ್ತು ಮೂಳೆ ನೋವಿನಿಂದ ಬಳಲುತ್ತಿದ್ದಾರೆ. ಅದೃಷ್ಟವಶಾತ್, ಡೇನಿಯಲ್ ಕೇವಲ ಸೌಮ್ಯವಾದ ನೋವನ್ನು ಅನುಭವಿಸಿದ್ದಾರೆ. ಹಾಗಾಗಿಯೇ ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಇದನ್ನೂ ಓದಿ:ಇಂಡೋನೇಷ್ಯಾದ ಮಸೀದಿಯಿಂದ ಜಗತ್ತಿಗೆ 'ಹಸಿರು ರಂಜಾನ್' ಸಂದೇಶ