ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದ ರಂಜಿತ್ ನಾಥ್ ಎಂಬುವರು ಕಳೆದ 11 ವರ್ಷಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾ ಬಂದಿದ್ದು, ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
11 ವರ್ಷಗಳಿಂದ ಬೀದಿ ನಾಯಿಗಳಿಗೆ ಬಿರಿಯಾನಿ ನೀಡುತ್ತಿರುವ ರಂಜಿತ್ ದಾದಾ! - Abhinav Jeswani
ಬೀದಿ ನಾಯಿಗಳನ್ನು ಮಕ್ಕಳಂತೆ ಬೆಳೆಸಿರುವ ಇವರು ಕುರಿ-ಕೋಳಿ ಮಾಂಸವನ್ನು ಬಳಸಿ ಮಸಾಲೆಯುಕ್ತವಾಗಿ ರುಚಿಯಾದ ಬಿರಿಯಾನಿ ನೀಡುತ್ತಾ ಹಸಿದ ಶ್ವಾನಗಳ ಹೊಟ್ಟೆ ತುಂಬಿಸುತ್ತಿದ್ದಾರೆ.
ರಂಜಿತ್ ನಾಥ್ ಅವರ ಈ ಕಾರ್ಯವನ್ನು ಅಭಿನವ್ ಜೆಸ್ವಾನಿ ಎಂಬುವರು ಇನ್ಸ್ಟಾಗ್ರಾಂನಲ್ಲಿ ಬೆಳಕಿಗೆ ತಂದಿದ್ದಾರೆ. ರಂಜಿತ್ ನಾಥ್ ಅವರನ್ನು 'ರಂಜಿತ್ ದಾದಾ', 'ಡಾಗ್ ಮ್ಯಾನ್ ಆಫ್ ನಾಗ್ಪುರ', 'ಒನ್ ಮ್ಯಾನ್ ಆರ್ಮಿ' ಎಂದು ಅಭಿನವ್ ಜೆಸ್ವಾನಿ ಶ್ಲಾಘಿಸಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ನಿಮ್ಮ ನಿಮ್ಮ ಇನ್ಸ್ಟಾಗ್ರಾಂ ರೀಲ್ನಲ್ಲಿ ಶೇರ್ ಮಾಡಿ, ಇವರಿಗೆ ಗೌರವ ಸೂಚಿಸುವಂತೆ ಮನವಿ ಮಾಡಿದ್ದಾರೆ.
ಬೀದಿ ನಾಯಿಗಳನ್ನು ಮಕ್ಕಳಂತೆ ಬೆಳೆಸಿರುವ ರಂಜಿತ್, ನಾಯಿಗಳಿಗೆ ಬಿಸ್ಕತ್ತು ನೀಡುವ ಮೂಲಕ ತಮ್ಮ ಸೇವೆ ಪ್ರಾರಂಭಿಸಿದರು. ಇದೀಗ ಕುರಿ-ಕೋಳಿ ಮಾಂಸವನ್ನು ಬಳಸಿ ಮಸಾಲೆಯುಕ್ತವಾಗಿ ರುಚಿಯಾದ ಬಿರಿಯಾನಿ ನೀಡುತ್ತಾ ಹಸಿದ ಶ್ವಾನಗಳ ಹೊಟ್ಟೆ ತುಂಬಿಸುತ್ತಿದ್ದಾರೆ.