ಬೆಂಗಳೂರು: 'ಒಂದು ಮೊಟ್ಟೆಯ ಬೆಲೆ ಎಷ್ಟು?' - ಐದು, ಹತ್ತು.. ಇನ್ನೂ ದೊಡ್ಡದಾದರೆ ಇಪ್ಪತ್ತು ರೂಪಾಯಿ. ಅಷ್ಟೇ! ಆದರೆ, ಇಲ್ಲೊಂದು ಕೋಳಿ ಮೊಟ್ಟೆಯ ಬೆಲೆ ಹತ್ತಾರು ಅಥವಾ ನೂರಲ್ಲ, ಆದರೆ ಸಾವಿರಾರು ರೂಪಾಯಿ. ಏನಿದೆಲ್ಲ ಎಂದು ಕೇಳುವಿರಾ? ನಂಬಿಕೆಯಾಗುತ್ತಿಲ್ಲವೆ? ಹಾಗಾದರೆ ಮುಂದೆ ಓದಿ. ರೋಚಕ ಸಂಗತಿಯನ್ನು ತಿಳಿದುಕೊಳ್ಳಿ.
ಯುನೈಟೆಡ್ ಕಿಂಗ್ಡಮ್ನ ಅನಾಬೆಲ್ ಎಂಬ ಮಹಿಳೆ ಬೀದಿಗಳಲ್ಲಿ ತಿರುಗಾಡುವ ಕೋಳಿಗಳನ್ನು ನೋಡಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ಆಕೆ ಅದೇ ಕೆಲಸ ಮಾಡುತ್ತಿದ್ದಾಳೆ. ಕೆಲವು ವರ್ಷಗಳ ಹಿಂದೆ ಅವಳ ಬಳಿಗೆ ಬಂದ ಕೋಳಿಯೊಂದು ಇತ್ತೀಚೆಗೆ ಮೊಟ್ಟೆಯಿಟ್ಟಿತು. ಕೋಳಿಗಳು ಮೊಟ್ಟೆ ಇಟ್ಟು ಮರಿ ಮಾಡುವುದು ಸಹಜ ಅಂತೀರಲ್ವಾ..! ಆದರೆ, ಈ ಮೊಟ್ಟೆಯು ಎಲ್ಲ ಮೊಟ್ಟೆಗಳಂತೆ ಅಂಡಾಕಾರವಾಗಿರಲಿಲ್ಲ. ಬದಲಾಗಿ ಇದು ದುಂಡಗಾಗಿತ್ತು.
ಗೂಗಲ್ ಮಾಡಿದಾಗ ತಿಳಿದಿತ್ತು ಮೊಟ್ಟೆಯ ವೈಶಿಷ್ಟ್ಯತೆ!:ಟ್ವಿನ್ಸ್ಕಿ ಎಂದು ಪ್ರೀತಿಯಿಂದ ಕರೆಯುವ ಕೋಳಿ ಇಟ್ಟಿದ್ದ ದುಂಡಗಿನ ಮೊಟ್ಟೆಯನ್ನು ನೋಡಿದಾಗ ಅನಾಬೆಲ್ ಮೊದಲಿಗೆ ಆಶ್ಚರ್ಯಚಕಿತರಾದರು. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗೂಗಲ್ ನಲ್ಲಿ ಹುಡುಕತೊಡಗಿದರು. ಆ ದುಂಡಗಿನ ಮೊಟ್ಟೆಯು 'ಕೋಟಿಯಲ್ಲಿ ಒಂದು' ಮೊಟ್ಟೆಯಾಗಿರುವುದು ಗೂಗಲ್ ಮೂಲಕ ಅವರಿಗೆ ತಿಳಿದು ಬಂದಿತು. ಅಂದರೆ ಪ್ರತಿ ನೂರು ಕೋಟಿ ಮೊಟ್ಟೆಗಳಲ್ಲಿ ಹೀಗೆ ದುಂಡಗಿರುವ ಒಂದೇ ಒಂದು ಮೊಟ್ಟೆ ಉತ್ಪತ್ತಿಯಾಗುತ್ತದಂತೆ. ಇದನ್ನು ತಿಳಿದ ಮಹಿಳೆಗೆ ಸಿಕ್ಕಾಪಟ್ಟೆ ಖುಷಿಯಾಯಿತು. ಆ ದುಂಡಗಿನ ಮೊಟ್ಟೆಯನ್ನು ತಿನ್ನಲು ಬಯಸದ ಅವಳು ಅದನ್ನು ಆನ್‌ಲೈನ್ ಮೂಲಕ ಹರಾಜಿಗೆ ಇಟ್ಟಳು. ಹರಾಜಿನಲ್ಲಿ ಇದರ ಬೆಲೆಯನ್ನು 48 ಸಾವಿರ ರೂಪಾಯಿ ಎಂದು ಘೋಷಿಸಲಾಗಿದೆ.