ಕರ್ನಾಟಕ

karnataka

ETV Bharat / bharat

ಸ್ಟಾರ್ಟ್​ಅಪ್​ನ ನವೋದ್ಯಮಿಗಳ ಕನಸಿಗೆ ನೀರೆರೆದ ನಿರ್ಮಲಾ

ನವೋದ್ಯಮಗಳಿಗೆ ಉತ್ತೇಜನ ನೀಡಲು ಏಂಜೆಲ್ ತೆರಿಗೆ ರದ್ದನ್ನು ಒಂದು ವರ್ಷ ಮುಂದೂಡಿಕೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.

The FM proposes extension of tax holiday for start ups by one more year
ತೆರಿಗೆ ರಜೆ ಒಂದು ವರ್ಷ ಮುಂದೂಡಿಕೆ

By

Published : Feb 1, 2021, 1:54 PM IST

ನವದೆಹಲಿ:ಸ್ಟಾರ್ಟ್​​ಅಪ್​ನಂತಹ ನವೋದ್ಯಮಗಳಿಗೆ ಉತ್ತೇಜನ ನೀಡಲು ಏಂಜೆಲ್ ತೆರಿಗೆ (ಬಂಡವಾಳ ಹೂಡಿಕೆ ಮೇಲಿನ ತೆರಿಗೆ) ರದ್ದನ್ನು ಒಂದು ವರ್ಷ ಮುಂದೂಡಿಕೆ ಮಾಡುವುದಾಗಿ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

100 ಕೋಟಿ ರೂ. ವಹಿವಾಟಿನ ನವೋದ್ಯಮಗಳಿಗೆ, 10 ವರ್ಷಗಳಲ್ಲಿ 3 ಹಣಕಾಸಿನ ವರ್ಷಗಳಲ್ಲಿ ಶೇ 100ವರೆಗೆ ಕಡಿತದ ರಿಯಾಯಿತಿ ನೀಡುತ್ತಿದೆ. ಇದನ್ನು ಮತ್ತೆ ಒಂದು ವರ್ಷ ಮುಂದೂಡಿಕೆ ಮಾಡಿದೆ.

ನವೋದ್ಯಮದ ಬಹು ಬೇಡಿಕೆಯಾದ ಏಂಜೆಲ್​ ತೆರಿಗೆ ಹಿಂಪಡೆತಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಬಜೆಟ್​ನಲ್ಲಿ ಒಪ್ಪಿಗೆ ಸೂಚಿಸಿ, 'ಬಂಡವಾಳ ಹೂಡಿಕೆ ಮೇಲಿನ ತೆರಿಗೆ ರದ್ದು ಹಾಗೂ ಆದಾಯ ತೆರಿಗೆ ಪರಿಶೀಲನೆಯಿಂದ ವಿನಾಯಿತಿ' ನೀಡುವುದಾಗಿ ಹೇಳಿದ್ದರು.

ABOUT THE AUTHOR

...view details