ಕರ್ನಾಟಕ

karnataka

ETV Bharat / bharat

ಅ.26ಕ್ಕೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿರುವ ಬಾಂಬೆ ಹೈಕೋರ್ಟ್ - Shah Rukh Khan

ಡ್ರಗ್ಸ್​​​​ ಪ್ರಕರಣ ಸಂಬಂಧ ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್ ಅವರ​ ಪುತ್ರ ಆರ್ಯನ್​ ಖಾನ್​ರ ಜಾಮೀನು ಅರ್ಜಿಯನ್ನು ಅಕ್ಟೋಬರ್ 26 ರಂದು ಬಾಂಬೆ ಹೈಕೋರ್ಟ್ ನಡೆಸಲಿದೆ ಎಂದು ಆರ್ಯನ್ ಪರ ವಕೀಲರು ತಿಳಿಸಿದ್ದಾರೆ.

ಆರ್ಯನ್ ಖಾನ್
ಆರ್ಯನ್ ಖಾನ್

By

Published : Oct 21, 2021, 1:26 PM IST

ಮುಂಬೈ:ಕ್ರೂಸ್ ಡ್ರಗ್ಸ್​​​​ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್ ಅವರ​ ಪುತ್ರ ಆರ್ಯನ್​ ಖಾನ್​ರ ಜಾಮೀನು ಅರ್ಜಿಯನ್ನು ಅಕ್ಟೋಬರ್ 26 ರಂದು ಬಾಂಬೆ ಹೈಕೋರ್ಟ್ ನಡೆಸಲಿದೆ.

ಹಡಗಿನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದಡಿ ಅಕ್ಟೋಬರ್ 2 ರಂದು ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 11 ಮಂದಿಯನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್​ಸಿಬಿ) ಬಂಧಿಸಿತ್ತು. ನಿನ್ನೆಯಷ್ಟೇ ಆರ್ಯನ್ ಖಾನ್ ಸೇರಿದಂತೆ ಮೂವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಮುಂಬೈನ ವಿಶೇಷ ಎನ್​ಡಿಪಿಎಸ್ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ಇದನ್ನೂ ಓದಿ: ಮುಂಬೈ ಆರ್ಥರ್‌ ರೋಡ್‌ ಜೈಲಿಗೆ ಬಂದು ಮಗನ ಭೇಟಿ ಮಾಡಿದ ಶಾರೂಖ್ ಖಾನ್

ಈ ಆದೇಶವನ್ನು ಪ್ರಶ್ನಿಸಿ ಆರ್ಯನ್ ಖಾನ್ ಪರ ವಕೀಲ ಅಲಿ ಕಾಶೀದ್ ದೇಶಮುಖ್ ಅವರು ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅ.26ಕ್ಕೆ ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಶಾರೂಕ್​ ಮನೆ ಮೇಲೆ ಎನ್​ಸಿಬಿ ದಾಳಿ

ಇತ್ತ ಇಂದು ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್​ನನ್ನು ನೋಡಲು ನಟ ಶಾರೂಕ್ ಖಾನ್​ ಜೈಲಿಗೆ ಆಗಮಿಸಿದ್ದು, ಅತ್ತ ಶಾರೂಕ್​ ಮನೆ ಮೇಲೆ ಎನ್​ಸಿಬಿ ದಾಳಿ ನಡೆಸಿದೆ.

ABOUT THE AUTHOR

...view details