ಜಲಂಧರ್(ಪಂಜಾಬ್):ಕೊಲೆ ಸುಲಿಗೆಯಂತಹ ಪ್ರಕರಣಗಳು ಪಂಜಾಬ್ನಲ್ಲಿ ಹೆಚ್ಚಾಗುತ್ತಿದೆ. ಇದೇ ರೀತಿಯ ಮತ್ತೊಂದು ಪ್ರಕರಣ ನಕೊದರ್ನಲ್ಲಿ ನಡೆದಿದೆ. ಜವಳಿ ಉದ್ಯಮಿ ಟಿಮ್ಮಿ ಚಾವ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
20 ಲಕ್ಷ ಲಂಚದ ಬೇಡಿಕೆ:ಕಳೆದ ಕೆಲವು ದಿನಗಳ ಹಿಂದೆ ಜವಳಿ ಉದ್ಯಮಿಗೆ 20 ಲಕ್ಷ ಲಂಚದ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದೆ. ಇಲ್ಲದೇ ಹೋದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಬಳಿಕ ಇಬ್ಬರು ಗನ್ ಮ್ಯಾನ್ಗಳನ್ನು ರಕ್ಷಣೆಗೆ ಉದ್ಯಮಿ ನೇಮಿಸಿಕೊಂಡಿದ್ದರು. ಈ ಗನ್ ಮ್ಯಾನ್ಗಳು ಕೂಡ ಈ ದಾಳಿ ವೇಳೆ ಜೊತೆಯಲ್ಲಿಯೇ ಇದ್ದರು.
ಪ್ರಕರಣ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿಯಾಗಿರುವ ಹರ್ಮಿಂದರ್ ಸಿಂಗ್ ಎಂಬುವರು, ನಾನು ಅವರ ಜೊತೆ ಯಾವಾಗಲೂ ಇರುತ್ತಿದ್ದೆ. ನಾನು ಶಾಪ್ನ ಕೀಗಳನ್ನು ಹಾಕಿ ಕಾರಿನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಈ ರೀತಿ ದುರ್ಘಟನೆ ನಡೆದುಹೋಯಿತು. ಗ್ರಾಹಕರ ಸೋಗಿನಲ್ಲಿ ದುಷ್ಕರ್ಮಿಗಳು ಅಂಗಡಿಗೆ ಬಂದಿದ್ದಾರೆ ಎಂದರು.
ಘಟನೆ ಕುರಿತು ಮಾತನಾಡಿರುವ ಐಜಿಎಸ್ ಸಂದು, ಪ್ರಕರಣದ ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಅತ್ಯಾಚಾರ ಆರೋಪದಿಂದ ಮಾನಸಿಕ ಖಿನ್ನತೆ: ಪತ್ನಿ, ಮಕ್ಕಳಿಗೆ ವಿಷಹಾಕಿ ಕೊಂದು ವ್ಯಕ್ತಿ ಆತ್ಮಹತ್ಯೆ