ಕರ್ನಾಟಕ

karnataka

ETV Bharat / bharat

ಇಲ್ಲಿದೆ 'ಕೊರೊನಾದೇವಿ'ಯ ದೇವಸ್ಥಾನ.. 48 ದಿನಗಳಿಂದ ವಿಶೇಷ ಪ್ರಾರ್ಥನೆ - ಕೊರೊನಾ ದೇವಿ ದೇವಸ್ಥಾನ

ಮಹಮಾರಿ ಕೊರೊನಾ ವೈರಸ್​​ ಬಿಕ್ಕಟ್ಟಿನಿಂದ ದೇಶ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ತಮಿಳುನಾಡಿನ ಗ್ರಾಮವೊಂದರಲ್ಲಿ ಕೊರೊನಾದೇವಿಯ ವಿಶೇಷ ಪೂಜೆ ಮಾಡಲಾಗ್ತಿದೆ.

Temple for Corona Devi
Temple for Corona Devi

By

Published : May 19, 2021, 7:55 PM IST

ಕೊಯಮತ್ತೂರು (ತಮಿಳುನಾಡು): ದೇಶದಲ್ಲಿ ಎರಡನೇ ಹಂತದ ಕೋವಿಡ್​​ ಅಲೆ ಜೋರಾಗಿದ್ದು, ನಿತ್ಯ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಹಾಮಾರಿ ಹೊಡೆದೊಡಿಸಲು ಅನೇಕ ರೀತಿಯ ಯಜ್ಞ, ಪೂಜೆ - ಪುನಸ್ಕಾರ ನಡೆಯುತ್ತಿವೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಕೊರೊನಾದೇವಿಯ ದೇವಸ್ಥಾನವಿದೆ.

'ಕೊರೊನಾದೇವಿ'ಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ತಮಿಳುನಾಡಿನ ಕೊಯಮತ್ತೂರು ಬಳಿಕ ಗ್ರಾಮದಲ್ಲಿ ಕೊರೊನಾದೇವಿ ದೇವಸ್ಥಾನ ಸ್ಥಾಪಿಸಲಾಗಿದ್ದು, ಸಾಂಕ್ರಾಮಿಕ ರೋಗದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಕಳೆದ 48 ದಿನಗಳಿಂದ ಮಹಾಯಜ್ಞ ನಡೆಸಲಾಗುತ್ತಿದೆ.

ಕಾಮಚಿಪುರಿಯ ಶ್ರೀ ಶಿವಲಿಂಗೇಶ್ವರ ಸ್ವಾಮಿ ಈ ಯಜ್ಞ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಕೊರೊನಾದಿಂದ ಮಾನವ ಜೀವನ ಅಸ್ತವ್ಯಸ್ಥಗೊಂಡಿದೆ. ಈ ಹಿಂದೆ ಕೂಡ ದಡಾರ, ಕಾಲರಾದಂತಹ ಸಾಂಕ್ರಾಮಿಕ ರೋಗ ಬಂದಾಗ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆ ವೇಳೆ ಮರಿಯಮ್ಮನ್​, ಮಕಲಿಯಮ್ಮನ್​ ಮತ್ತು ಕರುಮರಿಯಮ್ಮನ್​​ ದೇವತೆಯನ್ನ ನಂಬಿ ಗ್ರಾಮದಲ್ಲಿ ಪೂಜೆ ನಡೆಸಲಾಗುತ್ತಿತ್ತು ಎಂದಿದ್ದಾರೆ. ಇದೀಗ ಕೊರೊನಾ ದೇವಿ ದೇವಸ್ಥಾನ ನಿರ್ಮಿಸಿ ಪೂಜೆ ನಡೆಸಲಾಗುತ್ತಿದೆ ಎಂದರು.

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಸಾಂಕ್ರಾಮಿಕ ರೋಗ ಉಲ್ಭಣಗೊಂಡಾಗ ಅಮ್ಮನ್​ ಮೊರೆ ಹೋಗಿ ದೇವಸ್ಥಾನಗಳಲ್ಲಿ ಪೂಜೆ ನಡೆಸುವುದು ವಿಶೇಷವಾಗಿದೆ.

ABOUT THE AUTHOR

...view details