ಕರ್ನಾಟಕ

karnataka

ETV Bharat / bharat

ವಯಸ್ಸು ಬರೀ 12 ಒಲಿದ ಪದಕಗಳು 151.. ಇದು ವಂಡರ್ ಗರ್ಲ್ ಪವರ್​ - ವಯಸ್ಸು ಬರೀ 12 ಒಲಿದ ಪದಕಗಳು 151

ಟೇಕ್ವಾಂಡೋದಲ್ಲಿ ತೆಲಂಗಾಣದ 12 ವರ್ಷದ ಬಾಲಕಿಯೊಬ್ಬಳು ಅಪ್ರತಿಮ ಸಾಧನೆ ಮಾಡಿದ್ದಾರೆ. ಈವರೆಗೂ ಪುಟ್ಟ ಸಾಧಕಿ 150 ಚಿನ್ನದ ಪದಕಗಳನ್ನು ಕೊಳ್ಳೆ ಹೊಡೆದಿದ್ದಾರೆ.

telangana-girl-achieve-in-taekwondo
ಇದು ತೆಲಂಗಾಣದ ವಂಡರ್ ಗರ್ಲ್ ಪವರ್​

By

Published : Nov 16, 2022, 3:54 PM IST

ಹೈದರಾಬಾದ್​:ಟೇಕ್ವಾಂಡೋ ಕ್ರೀಡೆಯಲ್ಲಿ ತೆಲಂಗಾಣದ 12 ವರ್ಷದ ಬಾಲಕಿ ಗಿನ್ನಿಸ್​ ದಾಖಲೆ ಬರೆದಿದ್ದಾರೆ. ಪಂಚಕುಲ ನಿವಾಸಿಯಾದ ತಾರುಷಿ ಚಿಕ್ಕ ವಯಸ್ಸಿನಲ್ಲೇ ಮಹತ್ತರ ಸಾಧನೆ ಮಾಡಿರುವ ಫೈಟರ್​.

ಟೇಕ್ವಾಂಡೋ ಆಟದಲ್ಲಿ ಅಪ್ರತಿಮ ಕೌಶಲ್ಯ ಹೊಂದಿರುವ ಈಕೆ ಈವರೆಗೂ ಯಾರೂ ಗಳಿಸದಷ್ಟು ಪದಕಗಳನ್ನು ಕೊಳ್ಳೆ ಹೊಡೆದಿದ್ದಾರೆ. ತಾರುಷಿ ಪಂಚ್​ಗೆ 151 ಚಿನ್ನ, 40 ಬೆಳ್ಳಿ ಹಾಗೂ 34 ಕಂಚಿನ ಪದಕಗಳು ಖಾತೆ ಸೇರಿವೆ. ಇದು ದೇಶದಲ್ಲಿಯೇ ಈ ವಯಸ್ಸಿನ ಯಾವ ಬಾಲಕ, ಬಾಲಕಿಯರಿಂದ ಈ ಸಾಧನೆ ಮೂಡಿಬಂದಿಲ್ಲ. ಹೀಗಾಗಿ ಇದು ಗಿನ್ನೆಸ್ ಬುಕ್​ನಲ್ಲಿ ದಾಖಲಾಗಿದೆ.

ಪದಕಗಳ ಜೊತೆ ಟೇಕ್ವಾಂಡೋ ಫೈಟರ್​ ತಾರುಷಿ

ದೇಶದ ಮೊದಲ ಸಾಧಕಿ:ಟೇಕ್ವಾಂಡೋದಲ್ಲಿ ಎರಡು ಬ್ಲ್ಯಾಕ್​ ಬೆಲ್ಟ್​ ಪಡೆದ ದೇಶದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. 2022 ರ 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ'ಕ್ಕೂ ಪಾತ್ರವಾಗಿರುವ ತಾರುಷಿ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಗೆದ್ದಿದ್ದಾರೆ.

ಟೇಕ್ವಾಂಡೋದಲ್ಲಿ ತಾರುಷಿ ಪಂಚ್​

ಇನ್ನು ಕಿರಿಯ ಅಪ್ರತಿಮ ಸಾಧಕಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಬಾಕ್ಸಿಂಗ್‌ ಚಾಂಪಿಯನ್​ ಮೇರಿ ಕೋಮ್‌ ಅವರೇ ತಮಗೆ ಮಾದರಿ. ಭವಿಷ್ಯದಲ್ಲಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಗುರಿ ಇದೆ ಎನ್ನುತ್ತಾರೆ ತಾರುಷಿ.

ಓದಿ:ಸುಂದರಿ ಐಶ್ವರ್ಯಾ ರೈ ಮಗಳ ಜನ್ಮದಿನ.. ಆರಾಧ್ಯಳಿಗೆ ಸಿಹಿ ಮುತ್ತು ಕೊಟ್ಟು ಶುಭಕೋರಿದ ತಾಯಿ

ABOUT THE AUTHOR

...view details