ಸಂಗಾರೆಡ್ಡಿ(ತೆಲಂಗಾಣ):ಸಂಗಾರೆಡ್ಡಿ ಜಿಲ್ಲೆಯ ಚೌಟಕುರ್ಜ ಮಂಡಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ - ಕಾರಿನ ನಡುವೆ ನಡೆದ ಮುಖಾಮುಖಿಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನ ಲ್ಯೂಕ್, ದಿವೇನ್, ಪದ್ಮ(30), ಅಂಬಾದಾಸ್(40) ಮತ್ತು ವಿವೇಕ್(6) ಎಂದು ಗುರುತಿಸಲಾಗಿದೆ. ಊರಿಗೆ ವಾಪಸ್ ಬರುತ್ತಿದ್ದ ವೇಳೇ ಚೌಟಕೂರ್ನಲ್ಲಿ ಈ ಘಟನೆ ನಡೆದಿದ್ದು, ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.
ಮೃತದೇಹಗಳಮ್ಮ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ತದನಂತರ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಎಸ್ಐ ನಾಗಲಕ್ಷ್ಮಿ ತೆರಳಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.