ಲಖನೌ:ಕನೌಜ್‌ನ ತಿರ್ವಾ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿದ್ದ ಜಲೌನ್‌ನ ಶಿಕ್ಷಕ ಸಾವನ್ನಪ್ಪಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಎಸ್ಐಟಿ ಈ ಪ್ರಕರಣದ ತನಿಖೆ ನಡೆಸಿದ್ದು, ಅಂದಿನ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಎಫ್‌ಐಆರ್ ದಾಖಲಿಸಿದೆ.
ಠಾಣೆಯ ಶೌಚಾಲಯದಲ್ಲಿ ಶಿಕ್ಷಕನ ಶವ ಪತ್ತೆ:ಜಲೌನ್‌ನ ಗಿಧೌನ್ಸಾದ ಶಿಕ್ಷಕ ಪರ್ವತ್ ಸಿಂಗ್ 20 ಮಾರ್ಚ್ 2020 ರಂದು ತಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಸುಖಪುರವಾದಲ್ಲಿನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದ ತಮ್ಮ ಪತ್ನಿ ನೀರಜಾ ಸಿಂಗ್ರನ್ನು ಕರೆಯಲು ಬಂದಿದ್ದರು. ರಾತ್ರಿ ಪತ್ನಿ ಹಾಗೂ ಅತ್ತೆ ಜೊತೆ ಪರ್ವತ್ ಸಿಂಗ್ ಜಗಳವಾಡಿದ್ದಾರೆ. ಪತ್ನಿ ನೀರಜಾ ದೂರಿನ ಮೇರೆಗೆ ತಿರ್ವ ಪೊಲೀಸರು ಶಿಕ್ಷಕ ಪರ್ವತ್ ಸಿಂಗ್ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕ ಪರ್ವತ್ ಸಿಂಗ್ ಶವ ಪತ್ತೆಯಾಗಿತ್ತು. ಮೃತನ ತಂದೆ ಶ್ರೀರಾಮ ಅವರು ಸೊಸೆ ನೀರಜ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಿಸಿದ್ದರು.
ಓದಿ:ತಂದೆಯಿಂದಲೇ ಅಪ್ರಾಪ್ತ ಪುತ್ರಿಯ ಕೊಲೆ ಪ್ರಕರಣ: ಪ್ರಿಯಕರನ ವಿಚಾರಣೆ
ಸಿಬಿಸಿಐಡಿ ತನಿಖೆ: ಪೊಲೀಸ್ ಕಸ್ಟಡಿಯಲ್ಲಿದ್ದ ಶಿಕ್ಷಕ ಸಾವನ್ನಪ್ಪಿದ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಸಿಐಡಿಗೆ ವಹಿಸಲಾಗಿತ್ತು. ಇದರ ನಂತರ, ಸಿಬಿಸಿಐಡಿ ಅಂದಿನ ತಿರ್ವಾ ಠಾಣೆಯ ಉಸ್ತುವಾರಿ ತ್ರಿಭುವನ್ ಕುಮಾರ್, ಹೆಡ್ ಮೊಹರ್ರಿರ್ ರಾಧೇಶ್ಯಾಮ್, ಗಾರ್ಡ್ ಕಾನ್ಸ್ಟೇಬಲ್ ಅರುಣ್ ಕುಮಾರ್ ಮತ್ತು ಪ್ರಕರಣದ ತನಿಖೆ ನಡೆಸುತ್ತಿದ್ದ ಅಂದಿನ ಸದರ್ ಠಾಣೆಯ ಉಸ್ತುವಾರಿ ಇನ್‌ಸ್ಪೆಕ್ಟರ್ ವಿಕಾಸ್ ರೈ ವಿರುದ್ಧ ಎಫ್‌ಐಆರ್ ದಾಖಲಿಸಿದೆ.