ನವದೆಹಲಿ:ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪರಸ್ಪರ ಚರ್ಚಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಶನಿವಾರ ಸಂಜೆ ವೇಳೆಗೆ ಇಬ್ಬರೂ ಮಾತುಕತೆ ನಡೆಸಲಿದ್ದು, ಜಮ್ಮು ಕಾಶ್ಮೀರದ ಭದ್ರತೆ ಮತ್ತು ನಾಗರಿಕರ ಹತ್ಯೆ ಕುರಿತಂತೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಮಿತ್ ಶಾ ಅವರು ಮನೋಜ್ ಸಿನ್ಹಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಈಗ ಸದ್ಯಕ್ಕೆ ಅಮಿತ್ ಶಾ ಗುಜರಾತ್ನಲ್ಲಿದ್ದು, ಅಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೆಹಲಿಗೆ ಆಗಮಿಸಲಿದ್ದಾರೆ. ಇದಾದ ನಂತರ ಮನೋಜ್ ಸಿನ್ಹಾ ಅವರು ದೆಹಲಿಗೆ ಆಗಮಿಸಲಿದ್ದು, ಅವರೊಂದಿಗೆ ಕಾಶ್ಮೀರದ ವಿಚಾರ ಚರ್ಚೆಯಾಗಲಿದೆ.