ಕರ್ನಾಟಕ

karnataka

ETV Bharat / bharat

Covid 3ನೇ ಅಲೆ ನಿಭಾಯಿಸಲು 100 ಕೋಟಿ ರೂ. ರಿಲೀಸ್​ ಮಾಡಿದ ಸ್ಟಾಲಿನ್​

ದೇಶದಲ್ಲಿ ಮೂರನೇ ಹಂತದ ಕೋವಿಡ್ ಅಲೆ ಬರಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದ್ದು, ಇದರ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿರುವ ತಮಿಳುನಾಡು ಸರ್ಕಾರ 100ಕೋಟಿ ರೂ. ರಿಲೀಸ್ ಮಾಡಿದೆ.

Tamil Nadu CM Stalin
Tamil Nadu CM Stalin

By

Published : Jun 29, 2021, 7:35 PM IST

ಚೆನ್ನೈ(ತಮಿಳುನಾಡು):ದೇಶಾದ್ಯಂತ ಹೆಚ್ಚು ಆತಂಕ ಮೂಡಿಸಿದ್ದ ಕೋವಿಡ್​ ಎರಡನೇ ಅಲೆ ಇದೀಗ ಕಡಿಮೆಯಾಗಿದ್ದು, ಎಲ್ಲವೂ ಈ ಹಿಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ಮಧ್ಯೆ ಡೆಲ್ಟಾ ಫ್ಲಸ್​ ಆತಂಕ ಶುರುಗೊಂಡಿದೆ. ಜತೆಗೆ ಮೂರನೇ ಅಲೆ ಕೂಡ ಲಗ್ಗೆ ಹಾಕಲಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಹೀಗಾಗಿ ಕೆಲವೊಂದು ರಾಜ್ಯಗಳು ಸಾಂಕ್ರಾಮಿಕ ರೋಗ ತಡೆಗಟ್ಟಲು ಈಗಿನಿಂದಲೇ ತಯಾರಿ ನಡೆಸುತ್ತಿವೆ.

ಮಹಾಮಾರಿ ಕೊರೊನಾ ವೈರಸ್​ನ ಮೂರನೇ ಅಲೆ ಎದುರಿಸಲು ತಮಿಳುನಾಡು ಸರ್ಕಾರ 100 ಕೋಟಿ ರೂ. ಮೀಸಲಿಟ್ಟಿದೆ. ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆ ಮಾಡಿರುವ ಮುಖ್ಯಮಂತ್ರಿ ಸ್ಟಾಲಿನ್ ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿ(CMPRF) 100 ಕೋಟಿ ರೂ. ಮಂಜೂರು ಮಾಡಿದ್ದಾರೆ. ಇಲ್ಲಿಯವರೆಗೆ 353 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, ಈಗಾಗಲೇ 166.40 ಕೋಟಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: 'ನಿನ್ನ ಮರೆತರೆ ಚಪ್ಪಲಿಯಿಂದ ಹೊಡಿ ಎಂದಿದ್ದನಂತೆ'...ಅದೇ ಕೆಲಸ ಮಾಡಿದ ಯುವತಿ!

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಆಕ್ಸಿಜನ್​ ಖರೀದಿಗೆ ಈ ಹಣ ಬಳಕೆ ಮಾಡಿಕೊಳ್ಳುವಂತೆ ಸ್ಟಾಲಿನ್​ ತಿಳಿಸಿದ್ದಾರೆ. ಈ ಹಿಂದೆ 41.40 ಕೋಟಿ ರೂ. ಆಕ್ಸಿಜನ್​ ಖರೀದಿಗಾಗಿ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಕಳೆದ ಕೆಲ ದಿನಗಳಿಂದ ತಮಿಳುನಾಡಿನಲ್ಲೂ ಕೋವಿಡ್ ಹಾವಳಿ ಕಡಿಮೆಯಾಗಿದ್ದು, ಸದ್ಯ 40,954 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ABOUT THE AUTHOR

...view details