ಪಾಟ್ನಾ(ಬಿಹಾರ) : ಇಲ್ಲಿ ಮಂಕಿಪಾಕ್ಸನ ಮೊದಲ ಶಂಕಿತ ಪ್ರಕರಣ ದಾಖಲಾಗಿದೆ. ಬಿಹಾರದಲ್ಲಿ ಮಂಕಿಪಾಕ್ಸ್ ಶಂಕಿತ ಪ್ರಕರಣಕ್ಕೆ ಬೆಳಕಿಗೆ ಬರುತ್ತದ್ದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಶಂಕಿತ ಮಹಿಳೆ ಪಾಟ್ನಾ ನಗರವಾಸಿ ಎಂದು ತಿಳಿದು ಬಂದಿದೆ. ರೋಗಿಯ ರಕ್ತರ ಮಾದರಿಯನ್ನು ಪರೀಕ್ಷೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ಮೊದಲ ಶಂಕಿತ ರೋಗಿ ಪತ್ತೆಯಾದ ನಂತರ ಇಡೀ ಬಿಹಾರದಲ್ಲಿ ಎಚ್ಚರಿಕೆ ನೀಡಲಾಗಿದೆ. ಶಂಕಿತ ಮಹಿಳೆ ಎಂದು ಪಾಟ್ನಾ ಸಿವಿಲ್ ಸರ್ಜನ್ ತಿಳಿಸಿದ್ದಾರೆ. ತನಿಖೆಗಾಗಿ 4 ಜನರ ತಂಡವನ್ನು ಮಾಡಿ ಅವರ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಿಹಾರ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದ್ದಾರೆ.