ಕರ್ನಾಟಕ

karnataka

By

Published : Apr 19, 2022, 9:53 AM IST

ETV Bharat / bharat

ತ್ರಿಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ.. 63 ಹಂದಿಗಳು ಸಾವು

ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ದೇವಿಪುರದಲ್ಲಿರುವ ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆಯ (ARDD) ಬ್ರೀಡಿಂಗ್ ಫಾರ್ಮ್‌ನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ.

swine-flu-detected-in-tripura-63-pigs-died
ತ್ರಿಪುರ: ಆಫ್ರಿಕನ್ ಹಂದಿ ಜ್ವರ ಪತ್ತೆ, 63 ಹಂದಿಗಳು ಸಾವು

ಅಗರ್ತಲಾ (ತ್ರಿಪುರ): ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ದೇವಿಪುರದಲ್ಲಿರುವ ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆಯ (ARDD) ಬ್ರೀಡಿಂಗ್ ಫಾರ್ಮ್‌ನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಇಲಾಖೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಾದರಿಗಳನ್ನು ಪರೀಕ್ಷೆಗಾಗಿ ನಾರ್ತ್​ ಈಸ್ಟರ್ನ್​ ರೀಜನಲ್ ಡಯಗ್ನೋಸ್ಟಿಕ್ ಲ್ಯಾಬೋರೇಟರಿಗೆ ರವಾನಿಸಿದಾಗ ಹಂದಿ ಜ್ವರ ಇರುವುದು ಪತ್ತೆಯಾಗಿದೆ.

ಈಗ ಹಂದಿ ಫಾರ್ಮ್ ನಲ್ಲಿರುವ ಹಂದಿಗಳಿಗೂ ಈ ಹಂದಿಜ್ವರ ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ಪರೀಕ್ಷಾ ಮಾದರಿಗಳನ್ನು ಭೋಪಾಲ್‌ನ ನ್ಯಾಷನಲ್ ಡಿಸೀಸ್ ಡಯಾಗ್ನೋಸ್ಟಿಕ್ ಇನ್‌ಸ್ಟಿಟ್ಯೂಟ್‌ ಗೂ ಕಳುಹಿಸಲಾಗಿದ್ದು, ಅಲ್ಲಿಂದ ಬರುವ ವರದಿಗಾಗಿ ಕಾಯುತ್ತಿರುವುದಾಗಿ ಇಲಾಖೆ ತಿಳಿಸಿದೆ.

ಈ ಬಗ್ಗೆ ಎಚ್ಚೆತ್ತುಗೊಂಡ ಇಲಾಖೆಯು, ಹತ್ತು ಜನರನ್ನು ಒಳಗೊಂಡ ಎರಡು ತಂಡವನ್ನು ರಚಿಸಿದ್ದು, ಈ ತಂಡವನ್ನು ನುರಿತ ಪಶುವೈದ್ಯಾಧಿಕಾರಿಗಳು ಮುನ್ನಡೆಸಲಿದ್ದಾರೆ. ಇವರು ನೋಡಲ್ ಅಧಿಕಾರಿಗಳ ಸಮಿತಿಗೆ ವರದಿ ಮಾಡುತ್ತಾರೆ. ಹಂದಿಗಳ ಸಾಮೂಹಿಕ ಹತ್ಯೆಯ ಬಗ್ಗೆ ಉನ್ನತ ಅಧಿಕಾರಿಗಳಿಂದ ಆದೇಶ ಬಂದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಒಟ್ಟು 63 ಹಂದಿಗಳು ಮೃತಪಟ್ಟಿದ್ದು, ಈ ಮೊದಲು ಫಾರ್ಮ್‌ನಲ್ಲಿ 265 ಹಂದಿಗಳು ಮತ್ತು 185 ಹಂದಿ ಮರಿಗಳು ಇದ್ದವು ಎಂದು ಹೇಳಲಾಗ್ತಿದೆ.

ಓದಿ :ಭೀಕರ ರಸ್ತೆ ಅಪಘಾತ.. 6 ಮಂದಿ ದುರ್ಮರಣ, ಹಲವರಿಗೆ ಗಾಯ

ABOUT THE AUTHOR

...view details