ಕರ್ನಾಟಕ

karnataka

ETV Bharat / bharat

ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಸ್ವಿಗ್ಗಿ ಫುಡ್‌ ಡೆಲಿವರಿ ಬಾಯ್ - ಸಿಕಿಂದ್ರಾಬಾದ್​ ಅಪರಾಧ ಸುದ್ದಿ

ಸ್ವಿಗ್ಗಿ ಡೆಲಿವರಿ ಬಾಯ್​ ಸೆಲ್ಫಿ ವಿಡಿಯೋ ತೆಗೆದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಸಿಕಂದ್ರಾಬಾದ್​ನಲ್ಲಿ ನಡೆದಿದೆ.

swiggy delivery boy selfie suicide, swiggy delivery boy selfie suicide in secunderabad, secunderabad news, secunderabad crime news, ಸ್ವಿಗ್ಗಿ ಡೆಲಿವೆರಿ ಬಾಯ್​ ಸೆಲ್ಫಿ ಸುಸೈಡ್​, ಸಿಕಿಂದ್ರಾಬಾದ್​ನಲ್ಲಿ ಸ್ವಿಗ್ಗಿ ಡೆಲಿವೆರಿ ಬಾಯ್​ ಸೆಲ್ಫಿ ಸುಸೈಡ್, ಸಿಕಿಂದ್ರಾಬಾದ್​ ಸುದ್ದಿ, ಸಿಕಿಂದ್ರಾಬಾದ್​ ಅಪರಾಧ ಸುದ್ದಿ,
ಹೈದರಾಬಾದ್​ನಲ್ಲಿ ನೇಣಿಗೆ ಶರಣಾದ ಸ್ವಿಗ್ಗಿ ಬಾಯ್​

By

Published : Oct 21, 2021, 10:34 AM IST

Updated : Oct 21, 2021, 2:11 PM IST

ಹೈದರಾಬಾದ್​:ಇಲ್ಲಿನ ಸಿಕಂದ್ರಾಬಾದ್​ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್​ವೊಬ್ಬ ಸೆಲ್ಫಿ ವಿಡಿಯೋ ತೆಗೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜವಾಹರ್​ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ನವರಸ ಗಾರ್ಡನ್​ ಹಿಂಬದಿಯ ಮೋಹನ್​ರಾವ್​ ಕಾಲೋನಿಯಲ್ಲಿ ಅಶೋಕ್​ (29) ಫುಡ್‌ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ.

ಅಶೋಕ್​ಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದು ತಂದೆ, ತಾಯಿ ಮತ್ತು ಪತ್ನಿ ಕೆಲಸದ ಮೇಲೆ ಹೊರಗಡೆ ತೆರಳಿದ್ದರು. ಈ ವೇಳೆ ಸ್ವಂತಿ ವಿಡಿಯೋ ಮಾಡಿ ಸಾವಿಗೆ ಶರಣಾಗಿದ್ದಾನೆ. ಕೆಲಸ ಮುಗಿದ ಬಳಿಕ ಕುಟುಂಬಸ್ಥರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಅಶೋಕ್​ ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋವನ್ನು ತನ್ನ ಗೆಳೆಯರಿಗೆ ಕಳುಹಿಸಿದ್ದ. ಈ ವಿಡಿಯೋದಲ್ಲಿ ‘ನಾನು ನನ್ನ ಅಜ್ಜಿ ಬಳಿ ಹೋಗುತ್ತಿದ್ದೇನೆ. ಮತ್ತೆ ಯಾವತ್ತೂ ವಾಪಸ್​ ಬರುವುದಿಲ್ಲ’ ಎಂದು ತಿಳಿಸಿದ್ದಾನೆ.

ಈ ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಜವಾಹರ್​ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Oct 21, 2021, 2:11 PM IST

ABOUT THE AUTHOR

...view details