ಕರ್ನಾಟಕ

karnataka

ETV Bharat / bharat

ಶಂಕಿತ ಉಗ್ರರಿಂದ ಗುಂಡಿನ ದಾಳಿ : ಪೊಲೀಸ್​ನ ಸ್ಥಿತಿ ಗಂಭೀರ - ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು

ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿರುವ ಅಲಿ ಜಾನ್ ರಸ್ತೆಯಲ್ಲಿ ಕರ್ತವ್ಯನಿರತ ಪೊಲೀಸ್​​ನ ಮೇಲೆ ಗುಂಡಿನ ದಾಳಿ ನಡೆದಿದೆ. ಪೊಲೀಸ್​​ನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ..

Suspected militants shot at cop in Srinagar
ಶಂಕಿತ ಉಗ್ರರಿಂದ ಗುಂಡಿನ ದಾಳಿ: ಪೊಲೀಸ್​ಗೆ ಗಂಭೀರ ಗಾಯ

By

Published : May 7, 2022, 12:15 PM IST

ಶ್ರೀನಗರ, ಜಮ್ಮು ಕಾಶ್ಮೀರ :ಶಂಕಿತ ಉಗ್ರರು ಶನಿವಾರ ಶ್ರೀನಗರದ ಅಲಿ ಜಾನ್ ರಸ್ತೆಯಲ್ಲಿ ಕರ್ತವ್ಯನಿರತ ಪೊಲೀಸ್​​ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಪೊಲೀಸ್​​ ಸಿಬ್ಬಂದಿಯೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮ್ ಸಹಾಯವಾಣಿ 112ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗುಲಾಮ್ ಹಸನ್ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ್ದಾರೆ.

ಶನಿವಾರ ಬೆಳಗ್ಗೆ ಅಲಿ ಜಾನ್ ರಸ್ತೆಯ ಐವಾ ಸೇತುವೆಯ ಬಳಿ ಗುಲಾಮ್ ಹಸನ್ ತನ್ನ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಉಗ್ರರು ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡ ಗುಲಾಮ್ ಹಸನ್ ಸ್ಥಿತಿ ಚಿಂತಾಜನಕವಾಗಿದೆ.

ಚಿಕಿತ್ಸೆಗಾಗಿ ಶ್ರೀನಗರದ ಸೌರಾದಲ್ಲಿರುವ ಷೇರ್ ಇ ಕಾಶ್ಮೀರಿ ಇನ್ಸ್​ಟಿಟ್ಯೂಟ್ ಆಫ್ ಮೆಡಿಕಲ್​​ ಸೈನ್ಸ್‌​​ಗೆ ರವಾನಿಸಲಾಗಿದೆ. ಮತ್ತೊಂದೆಡೆ ಪರಾರಿಯಾದ ಉಗ್ರರನ್ನು ಹಿಡಿಯಲು ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮೂವರು ಐಎಎಸ್​ ಅಧಿಕಾರಿಗಳಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಹೈಕೋರ್ಟ್​

ABOUT THE AUTHOR

...view details