ಭವಾನಿಪಟ್ಟಣ(ಒಡಿಶಾ) : ಒಡಿಶಾದ ಕಾಲಹಂಡಿ ಜಿಲ್ಲೆಯ ಭವಾನಿಪಟ್ಟಣದಲ್ಲಿರುವ ರಿಸರ್ವ್ ಪೊಲೀಸ್ ಮೈದಾನವು ಮಾವೋವಾದಿ ಜೋಡಿಯ ವಿವಾಹಕ್ಕೆ ಸಾಕ್ಷಿಯಾಗಿದೆ. ನಿಷೇಧಿತ ಮಾವೋವಾದಿ ಸಂಘಟನೆಯ ಕಾರ್ಯಕರ್ತ ಕೇಸಬ್ ವೆಲಾಡಿ ಅಲಿಯಾಸ್ ರಾಮದಾಸ್ ಮತ್ತು ಕಲಾಂದೇಯಿ ಮಾಝಿ ಅಲಿಯಾಸ್ ಗೀತಾ ಅವರ ವಿವಾಹವು ಹಿಂದೂ ಸಂಪ್ರದಾಯದಂತೆ ಪೊಲೀಸರ ಸಮ್ಮುಖದಲ್ಲಿ ನಡೆದಿದೆ.
ಎಸ್ಪಿ ಡಾ.ಸರವಣ ವಿವೇಕ್ ಎಂ ಮತ್ತು ಸಿಆರ್‌ಪಿಎಫ್ 64ನೇ ಬೆಟಾಲಿಯನ್ ಕಮಾಂಡೆಂಟ್ ಬಿಬ್ಲಬ್ ಸರ್ಕಾರ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಜೋಡಿಯ ವಿವಾಹವು ಅದ್ಧೂರಿಯಾಗಿ ನಡೆದಿದೆ. ಡಿಐಜಿ ಎಸ್‌ಡಬ್ಲ್ಯೂಆರ್ ಕೋರಾಪುಟ್ ರಾಜೇಶ್ ಪಂಡಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.