ಕರ್ನಾಟಕ

karnataka

ETV Bharat / bharat

ನೋಟು ಅಮಾನ್ಯೀಕರಣದ ದಾಖಲೆ ಸಲ್ಲಿಸಲು ಕೇಂದ್ರ ಸರ್ಕಾರ, ಆರ್​ಬಿಐಗೆ ಸುಪ್ರೀಂ ಸೂಚನೆ

ನೋಟು ಅಮಾನ್ಯೀಕರಣ ಮಾಡಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸುಪ್ರೀಂಕೋರ್ಟ್​ ಕೇಂದ್ರ ಸರ್ಕಾರ ಮತ್ತು ಆರ್​ಬಿಐಗೆ ನಿರ್ದೇಶನ ನೀಡಿದೆ.

Etv Bharatdemonetization
ನೋಟು ಅಮಾನ್ಯೀಕರಣ

By

Published : Dec 7, 2022, 1:58 PM IST

ನವದೆಹಲಿ:ನೋಟು ಅಮಾನ್ಯೀಕರಣ ಮಾಡಿದ್ದರ ಕಾರಣ ಮತ್ತು ಉದ್ದೇಶಗಳ ದಾಖಲೆಯನ್ನು ನೀಡಲು ಸುಪ್ರೀಂಕೋರ್ಟ್​ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್​ ಬ್ಯಾಂಕ್​ಗೆ(ಆರ್​ಬಿಐ) ನಿರ್ದೇಶನ ನೀಡಿದೆ. ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡುವುದಾಗಿ ಕೇಂದ್ರದ ಪರ ವಕೀಲರು ತಿಳಿಸಿದ್ದಾರೆ.

2016 ರಲ್ಲಿ ಕೇಂದ್ರ ಸರ್ಕಾರ 1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ 58 ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನಡೆಸಿದ್ದ ಕೋರ್ಟ್​, ಆರ್ಥಿಕ ನೀತಿಯಾಗಿರುವ ಕಾರಣ ನ್ಯಾಯಾಲಯ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿತ್ತು.

ಇಂದು ಮತ್ತೆ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸಿದ್ದು, ಇದಕ್ಕೂ ಮೊದಲು ನೋಟ್​ಬಂಧಿ ಮಾಡಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಕೇಂದ್ರ ಸರ್ಕಾರ ಮತ್ತು ಆರ್​ಬಿಐಗೆ ಸೂಚಿಸಿತು.

ಮುಚ್ಚಿದ ಲಕೋಟೆಯಲ್ಲಿ ಮಾಹಿತಿ:ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಆರ್‌ಬಿಐನ ವಕೀಲ ಪಿ ಚಿದಂಬರಂ ಮತ್ತು ಶ್ಯಾಮ್ ದಿವಾನ್ ಅವರು ಮುಚ್ಚಿದ ಲಕೋಟೆಯಲ್ಲಿ ಸಂಬಂಧಪಟ್ಟ ಮಾಹಿತಿಯನ್ನು ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದ್ದಾರೆ.

ಓದಿ:ನೋಟು ಅಮಾನ್ಯೀಕರಣಕ್ಕೆ ಮೂರು ವರ್ಷ, ಜನಸಾಮಾನ್ಯರು ಏನಂತಾರೆ?

ABOUT THE AUTHOR

...view details