ಗುಜರಾತ್ : ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗುಜರಾತ್ ಜಲಾವೃತಗೊಂಡಿದೆ. ಕಳೆದ 24 ಗಂಟೆಗಳಲ್ಲಿ 2022ರ ಮುಂಗಾರು ಮಳೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಛೋಟೌದೇಪುರದ ಬೋಡೋಲಿಯಲ್ಲಿ ಅತಿ ಹೆಚ್ಚು ಅಂದರೆ 22 ಇಂಚು ಮಳೆಯಾಗಿದೆ. ರಾಜ್ಯದ ಒಟ್ಟು 12 ತಾಲೂಕುಗಳಲ್ಲಿ ಸರಾಸರಿ 8 ಇಂಚು ಹೆಚ್ಚು ಮಳೆಯಾಗಿದೆ.
ಇನ್ನೂ 4 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮತ್ತೊಂದೆಡೆ ಭಾರಿ ಮಳೆಯಿಂದಾಗಿ ರಸ್ತೆಗಳು ಬಂದ್ ಆಗಿವೆ. ಹಾನಿ ಸಮೀಕ್ಷೆಗೆ ಸಿದ್ಧತೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ರಾಜ್ಯದ 69 ತಾಲೂಕುಗಳಲ್ಲಿ ಗಣನೀಯ ಮಳೆಯಾಗಿರುವ ವರದಿಗಳಿವೆ. ಮಳೆಯಿಂದಾಗಿ 61 ಜನರು ಸಾವನ್ನಪ್ಪಿದ್ದಾರೆ. ಇದರ ನಡುವೆ ಗಾಂಧಿನಗರದ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಮಳೆಯಿಂದಾಗಿ 272 ಜಾನುವಾರುಗಳು ಸಾವಿಗೀಡಾಗಿವೆ.
ರಾಜ್ಯದ ಕಂದಾಯ ಸಚಿವ ರಾಜೇಂದ್ರ ತ್ರಿವೇದಿ ಮಾತನಾಡಿ, ಭಾರಿ ಮಳೆ ಹಿನ್ನೆಲೆ ರಾಜ್ಯಾದ್ಯಂತ ತಗ್ಗು ಪ್ರದೇಶಗಳಿಂದ 8,976 ಜನರನ್ನು ರಕ್ಷಿಸಲಾಗಿದೆ ಎಂದು ವಿವರಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಸ್ವೀಕರಿಸಿದ ವರದಿಗಳ ಪ್ರಕಾರ, ಕಚ್ ವಲಯದಲ್ಲಿ ಗರಿಷ್ಠ ಶೇ. 65.45, ದಕ್ಷಿಣ ಗುಜರಾತ್ ವಲಯದಲ್ಲಿ ಶೇ. 41.79 ಮತ್ತು ಸೌರಾಷ್ಟ್ರದಲ್ಲಿ ಶೇ. 39.43 ಮಳೆಯಾಗಿದೆ. ಇಂದು ಜುಲೈ 11, 2022 ಕ್ಕೆ ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದಾಖಲೆ ಮಳೆಯಾಗಿದೆ.
ಆರೋಗ್ಯ ಸಚಿವರ ಸಭೆ:ಅಹಮದಾಬಾದ್‌ನ ಪೂರ್ವ ಮತ್ತು ಪಶ್ಚಿಮ ಭಾಗದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅಹಮದಾಬಾದ್‌ನಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ, ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಜೋಧ್‌ಪುರ ಪ್ರದೇಶದಲ್ಲಿ ನಗರ ಆಯುಕ್ತರು ಮತ್ತು ಕಚೇರಿ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ನಗರದಲ್ಲಿ ಭಾನುವಾರ 18 ಇಂಚು ಮಳೆಯಾಗಿದೆ ಎಂಬ ಮಾಹಿತಿ ಹಬ್ಬಿದ್ದು ಅಹಮದಾಬಾದ್‌ನಲ್ಲಿ ಭಾರೀ ಮಳೆ ಮತ್ತು ಮುನ್ಸೂಚನೆಯ ಹಿನ್ನೆಲೆಯಲ್ಲಿ ನಗರದ ಎಲ್ಲ ಉದ್ಯಾನಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಗೌರಿ ವ್ರತದಿಂದಾಗಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಹಾನಗರ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.
ಮೋದಿ ಜೊತೆ ಸಿಎಂ ಮಾತುಕತೆ:ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಗುಜರಾತ್‌ನಲ್ಲಿ ವ್ಯಾಪಕ ಹಾಗೂ ಅತಿವೃಷ್ಟಿಯಿಂದ ಉಂಟಾಗಿರುವ ಭೀಕರ ಪರಿಸ್ಥಿತಿಯ ವಿವರ ಪಡೆದಿದ್ದಾರೆ.
ವಿಶೇಷವಾಗಿ ದಕ್ಷಿಣ ಮತ್ತು ಮಧ್ಯ ಗುಜರಾತ್ ಭಾಗದಲ್ಲಿ ಕಳೆದ 48 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ ಎಂದು ಸಿಎಂ ಪಟೇಲ್ ಹೇಳಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಪರಿಸ್ಥಿತಿಯ ಸಂಪೂರ್ಣ ವಿವರವನ್ನು ಈ ವೇಳೆ ನೀಡಿದ್ದಾರೆ. ಮಾನ್ಸೂನ್ ಪರಿಸ್ಥಿತಿಯನ್ನು ಎದುರಿಸಲು ಎನ್‌ಡಿಆರ್‌ಎಫ್ ಸೇರಿದಂತೆ ಎಲ್ಲ ಅಗತ್ಯ ಸಹಾಯಕ್ಕಾಗಿ ಕೇಂದ್ರ ಸರ್ಕಾರ ರಾಜ್ಯದ ಮಳೆ ಪೀಡಿತ ಜನರ ಪರವಾಗಿರಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
8,936 ಜನರ ಸ್ಥಳಾಂತರ:ಸಾವಿರಾರು ನಾಗರಿಕರನ್ನು ಸ್ಥಳಾಂತರಿಸಲು ಒತ್ತಾಯಿಸಲಾಗಿದೆ. ಮಾಹಿತಿಯ ಪ್ರಕಾರ, ಛೋಟೌದೇಪುರ, ವಲ್ಸಾದ್ ಮತ್ತು ನವಸಾರಿಯಲ್ಲಿ ಮಳೆಯಿಂದ ಹಾನಿಗೊಳಗಾದ 8,936 ಜನರನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದ ಹಾನಿಗೀಡಾದ ರಸ್ತೆಗಳ ಬಗ್ಗೆ ಮಾತನಾಡುವುದಾದರೆ, 33 ರಾಜ್ಯ ಹೆದ್ದಾರಿ, 1 ರಾಷ್ಟ್ರೀಯ ಹೆದ್ದಾರಿ ಮತ್ತು 356 ಪಂಚಾಯತ್ ಒಡೆತನದ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಸಾವಿರಾರು ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ರಾಜ್ಯದ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ಛೋಟಾ ಉದೇಪುರ್, ವಲ್ಸಾದ್ ಮತ್ತು ನವಸಾರಿಯಲ್ಲಿ 8,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡವರಿಗೆ ರಾಜ್ಯ ಸರ್ಕಾರದಿಂದ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಮುಂದೆ ಹಾನಿಯ ಸಮೀಕ್ಷೆಯ ನಂತರ ತಕ್ಷಣವೇ ಅವರಿಗೆಲ್ಲ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಅಹಮದಾಬಾದ್‌ನಲ್ಲಿ ಭಾರಿ ಮಳೆ ಸುರಿದಿದೆ. ನಿನ್ನೆ ತಡರಾತ್ರಿ ಅಹಮದಾಬಾದ್ ಮುನ್ಸಿಪಲ್ ಕಮಿಷನರ್ ಮತ್ತು ಪೊಲೀಸ್ ಆಯುಕ್ತರೊಂದಿಗೆ ಅಹಮದಾಬಾದ್ ಮಳೆಯ ಕುರಿತು ಚರ್ಚಿಸಿದ್ದೇನೆ. ನಾಗರಿಕರಿಗೆ ತೊಂದರೆಯಾಗದಂತೆ ಪಾಲಿಕೆ ಇಲಾಖೆ ಹಾಗೂ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತ್ರಿವೇದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ಬಿರುಗಾಳಿ ಸಹಿತ ಮಳೆ ಪೊಲೀಸರಿಂದ ಸಹಕಾರ: ಅಹಮದಾಬಾದ್ ನಗರದಲ್ಲಿ ಭಾರೀ ಮಳೆಯಿಂದಾಗಿ ಜನರ ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ಆಡಳಿತ ನಿರಂತರವಾಗಿ ಜನರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದೆ. ಜನರಿಗೆ ಸುರಕ್ಷಿತ ಸ್ಥಳವನ್ನು ಒದಗಿಸಲು ಪೊಲೀಸರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಸರಸ್‌ಪುರ ಪ್ರದೇಶದ ಶಾರದಾಬೆನ್ ಆಸ್ಪತ್ರೆಯು ಮಳೆಯಿಂದ ಜಲಾವೃತವಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದವರು ಆಸ್ಪತ್ರೆಗೆ ಹೋಗುವುದು ಹೇಗೆ, ಅಲ್ಲಿಂದ ಹೊರಬರುವುದು ಹೇಗೆ ಎಂದು ಪರದಾಡಿದ್ದರು. ಈ ವೇಳೆ ಪೊಲೀಸರು ಆಸ್ಪತ್ರೆಯಲ್ಲಿ ಸಿಲುಕಿದ್ದ ಮಕ್ಕಳು ಹಾಗೂ ರೋಗಿಗಳ ನೆರವಿಗೆ ಧಾವಿಸಿದ್ದಾರೆ.
ಇದನ್ನೂ ಓದಿ: ದೇಶದ ಅತ್ಯಂತ ಹಳೆಯ ಹುಲಿಗಳಲ್ಲಿ ಒಂದಾದ ರಾಯಲ್ ಬೆಂಗಾಲ್ 'ರಾಜಾ' ನಿಧನ