ಅನಂತನಾಗ್ (ಜಮ್ಮು-ಕಾಶ್ಮೀರ): ರಂಜಾನ್ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ ಪೊಲೀಸರು ಮತ್ತು ಸಿಆರ್ಪಿಎಫ್ ಯೋಧರ ಮೇಲೆ ಯುವಕರು ಕಲ್ಲು ತೂರಾಟ ನಡೆಸಿ ದೃಷ್ಕೃತ್ಯ ಎಸಗಿರುವ ಘಟನೆ ಅನಂತನಾಗ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಕಾಶ್ಮೀರದಲ್ಲಿ ರಂಜಾನ್ ಪ್ರಾರ್ಥನೆ ನಂತರ ಪೊಲೀಸರು, ಯೋಧರ ಮೇಲೆ ಕಲ್ಲು ತೂರಾಟ - Stone pelting in Anantnag
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಂಡಿ ಪ್ರದೇಶದಲ್ಲಿ ರಂಜಾನ್ ಹಬ್ಬದ ಪ್ರಾರ್ಥನೆ ಮುಗಿದ ಬಳಿಕ ಪೊಲೀಸರು ಮತ್ತು ಯೋಧರ ಮೇಲೆ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ.
ಕಾಶ್ಮೀರದಲ್ಲಿ ರಂಜಾನ್ ಪ್ರಾರ್ಥನೆ ನಂತರ ಕಲ್ಲು ತೂರಾಟ
ಇಲ್ಲಿನ ಜಂಗ್ಲಾತ್ ಮಂಡಿ ಪ್ರದೇಶದಲ್ಲಿ ಘಟನೆ ನಡೆದಿದೆ. ಪ್ರಾರ್ಥನೆ ಮುಗಿಸಿ ಮರಳುತ್ತಿದ್ದ ವೇಳೆ ಯೋಧರು ಮತ್ತು ಪೊಲೀಸರ ವಾಹನಗಳನ್ನು ಗುರಿಯಾಗಿಸಿ ಕಿಡಿಗೇಡಿಗಳು ಕಲ್ಲು ತೂರಿದರು. ಆಗ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ, ಪರಿಸ್ಥಿತಿ ತಿಳಿಗೊಳಿಸಿದರು. ಸ್ಥಳದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಜೋಧಪುರ್ನಲ್ಲಿ ಧ್ವಜ ವಿಚಾರವಾಗಿ ಗುಂಪು ಘರ್ಷಣೆ, ಶಾಸಕರ ಮನೆ ಬಳಿ ಬೈಕ್ಗೆ ಬೆಂಕಿ: ಇಂಟರ್ನೆಟ್ ಸ್ಥಗಿತ