ಕರ್ನಾಟಕ

karnataka

ETV Bharat / bharat

Modi@71.. ವಾರಾಣಸಿಯಲ್ಲಿ ವಿಶೇಷ ಗಂಗಾರತಿ - ಮೋದಿ ಜನ್ಮದಿನ

ಪ್ರಧಾನಿ ಮೋದಿಯವರ ಜನ್ಮದಿನ ಹಿನ್ನೆಲೆ ವಾರಾಣಸಿಯಲ್ಲಿ ಗಂಗಾರತಿ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಗಿದೆ.

ವಾರಾಣಸಿಯಲ್ಲಿ ವಿಶೇಷ ಗಂಗಾರತಿ
ವಾರಾಣಸಿಯಲ್ಲಿ ವಿಶೇಷ ಗಂಗಾರತಿ

By

Published : Sep 17, 2021, 7:51 AM IST

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿಯವರ 71 ನೇ ಜನ್ಮದಿನವಿಂದು. ಈ ಹಿನ್ನೆಲೆ ನಿನ್ನೆಯೇ ಅವರ ಸಂಸದೀಯ ಕ್ಷೇತ್ರದ ಜನರು ಪ್ರಧಾನಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

ವಾರಾಣಸಿಯಲ್ಲಿ ವಿಶೇಷ ಗಂಗಾರತಿ

ಅಸಿಘಾಟ್​ನಲ್ಲಿ ಮೋಕ್ಷ ದೈನಿ ಮಾ ಸಮಿತಿಯು ಗಂಗೆಯನ್ನು ವೇದಮಂತ್ರಗಳೊಂದಿಗೆ ಪೂಜಿಸಿ, ನರೇಂದ್ರ ಮೋದಿಯವರ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿದೆ.

ಜೈ ಮಾ ಗಂಗಾ ಸೇವಾ ಸಮಿತಿಯು ದೀಪಗಳನ್ನು 71 ಎಂದು ಜೋಡಿಸಿ ಪ್ರಧಾನಿಯ ಫೋಟೋ ಇಟ್ಟು ದೀಪ ಬೆಳಗಿಸಿದೆ. ಗಂಗಾರತಿಗೂ ಮುನ್ನ ಗಂಗಾ ಪೂಜೆಯನ್ನು ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು.

ದಶಾಶ್ವಮೇಧ ಘಾಟ್​​ನಲ್ಲಿ 701 ದೀಪಗಳಿಂದ ಪ್ರಧಾನಿ ಮೋದಿಯವರ 71 ನೇ ಜನ್ಮದಿನವೆಂದು ಬರೆಯುವ ಮೂಲಕ ಆಚರಿಸಲಾಯಿತು. ಈ ಆರತಿ ಕಾರ್ಯಕ್ರಮದಲ್ಲಿ ಕಾಶಿ ಪ್ರದೇಶದ ಸಂಸ್ಥೆಯ ಉಸ್ತುವಾರಿ ಅಶೋಕ್ ಚೌರಾಸಿಯಾ, ಪ್ರೇಮ್ ಮಿಶ್ರಾ, ಸೋಮನಾಥ್ ಮತ್ತು ಗಂಗಾ ಸೇವಾ ನಿಧಿ ಅಧ್ಯಕ್ಷ ಸುಶಾಂತ್ ಮಿಶ್ರಾ, ಅರ್ಚಕ ಆಚಾರ್ಯ ರಣಧೀರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ‘ನಮೋ’ಗೆ 71 ವರ್ಷದ ಜನ್ಮದಿನದ ಸಂಭ್ರಮ.. ಅವರ ಆಡಳಿತದ ಹಾದಿಯತ್ತ ಒಂದು ನೋಟ

ಗಂಗಾರತಿ ಬಳಿಕ ಜೈ ಮಾ ಗಂಗಾ ಸೇವಾ ಸಮಿತಿ ಸದಸ್ಯ ಅಶುತೋಷ್ ಚತುರ್ವೇದಿ ಮಾತನಾಡಿ, ನಮ್ಮ ಸಂಸದ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಜನ್ಮದಿನವಾಗಿದೆ. ಸ್ವಚ್ಛ ಭಾರತ ಅಭಿಯಾನವನ್ನು ಅವರು ಇಲ್ಲಿಂದಲೇ ಪ್ರಾರಂಭಿಸಿದರು. ಅವರಿಗೆ ಭಗವಂತ ಆಯುರಾರೋಗ್ಯ ಪ್ರಾಪ್ತಿಸಲೆಂದು ಪ್ರಾರ್ಥಿಸಿದ್ದೇವೆ ಎಂದರು.

ABOUT THE AUTHOR

...view details