ನವ ದೆಹಲಿ: ಸಂಸದೀಯ ಸಮಿತಿಗಳ ಅಧ್ಯಕ್ಷ ಸ್ಥಾನ ಹಂಚಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯ ಅಧಿರ್ ರಂಜನ್, ಸಂಸದೀಯ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಪ್ರತಿಪಕ್ಷಗಳಿಂದ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, 'ನೀವು ಸ್ಪೀಕರ್‌ಗೆ ಸವಾಲು ಹಾಕುತ್ತಿದ್ದೀರಿ. ಇದು ನನ್ನ ನಿರ್ಧಾರ (ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಹಂಚಿಕೆ ಮಾಡುವುದು)' ಎಂದು ಗರಂ ಆದರು.
ಲೋಕಸಭೆ ಕಲಾಪ: ಕಾಂಗ್ರೆಸ್‌ನ ಅಧಿರ್ ರಂಜನ್ ಚೌಧರಿಗೆ ಸ್ಪೀಕರ್ ಎಚ್ಚರಿಕೆ
ಸಂಸದೀಯ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಪ್ರತಿಪಕ್ಷಗಳಿಂದ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಎಚ್ಚರಿಕೆ ನೀಡಿದ ಸನ್ನಿವೇಶ ನಡೆಯಿತು.
ಲೋಕಸಭೇ ಕಲಾಪ: ಕಾಂಗ್ರೆಸ್ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಪೀಕರ್
ಇದೇ ಸಂದರ್ಭದಲ್ಲಿ ಟಿಎಂಸಿ ಸದಸ್ಯ ಸುದೀಪ್ ಬಂಡೋಪಾಧ್ಯಾಯ ಎದ್ದು ನಿಂತು, 'ನಮ್ಮ ಪಕ್ಷಕ್ಕೆ ಯಾವುದೇ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡುತ್ತಿಲ್ಲ. ನಾನು ಅಧ್ಯಕ್ಷರ ಮೇಲೆ ಆರೋಪ ಮಾಡುತ್ತಿಲ್ಲ. ಸದನದಲ್ಲಿ ಎರಡನೇ ಅತಿ ದೊಡ್ಡ ಪಕ್ಷಕ್ಕೆ ನೀವು ಸಮಿತಿಯನ್ನು ಹಂಚುವಂತಿಲ್ಲ. ನಾವು ಅದಕ್ಕಾಗಿ ಭಿಕ್ಷೆಯನ್ನೇನು ಬೇಡುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಗಡಿ ಗಲಾಟೆ: ಕರ್ನಾಟಕ-ಮಹಾರಾಷ್ಟ್ರ ಸಂಸದರ ನಡುವೆ ಗದ್ದಲ