ಕರ್ನಾಟಕ

karnataka

ETV Bharat / bharat

ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಮಾಜವಾದಿ ಸಂಸದ: ವಿಡಿಯೋ ಟ್ವೀಟ್ ಮಾಡಿ ಬಿಜೆಪಿ ಟೀಕೆ - ಸಮಾಜವಾದಿ ಪಕ್ಷದ ಸಂಸದ

ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡುತ್ತಿದ್ದ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಸಂಸದನೋರ್ವ ಮುಜುಗರ ಅನುಭವಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

SP MP forgets natinal anthem
SP MP forgets natinal anthem

By

Published : Aug 16, 2021, 12:24 PM IST

ನವದೆಹಲಿ:ದೇಶಾದ್ಯಂತ ನಿನ್ನೆ ಸಡಗರ-ಸಂಭ್ರಮದಿಂದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗಿದೆ. ಸ್ವಾತಂತ್ರ್ಯ ಆಚರಣೆ ವೇಳೆ ನಡೆಯುವ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಿ ಗೌರವ ನೀಡುವುದು ಪ್ರತಿಯೊಬ್ಬರ ಭಾರತೀಯರ ಕರ್ತವ್ಯ. ಆದರೆ ಸಮಾಜವಾದಿ ಪಕ್ಷದ ಸಂಸದ ಹಾಗೂ ಕಾರ್ಯಕರ್ತರು ರಾಷ್ಟ್ರಗೀತೆಯ ಕೆಲವು ಸಾಲುಗಳನ್ನು ಮರೆತು ಮುಜುಗರ ಅನುಭವಿಸಿದರು.

ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ಈ ಘಟನೆ ನಡೆದಿದೆ. ಧ್ವಜಾರೋಹಣ ಮಾಡಿರುವ ಸಮಾಜವಾದಿ ಸಂಸದ ಎಸ್​.ಟಿ ಹಸನ್ ಹಾಗೂ ಕೆಲವು ಬೆಂಬಲಿಗರು ರಾಷ್ಟ್ರಗೀತೆ ಹಾಡುವ ವೇಳೆ ಮಧ್ಯದ ಕೆಲವು ಸಾಲು ಮರೆತರು. ಈ ವೇಳೆ ಮುಜುಗರಕ್ಕೀಡಾಗಿದ್ದು, ಜಯ ಹೇ.. ಜಯ ಹೇ ಎಂದು ಕೊನೆಗೊಳಿಸಿದ್ದಾರೆ.

ಈ ಸನ್ನಿವೇಶದ ವಿಡಿಯೋ ತುಣುಕನ್ನು ಭಾರತೀಯ ಜನತಾ ಪಾರ್ಟಿಯ ವಕ್ತಾರ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮುಜುಗರದಿಂದ ಪಾರಾಗಲು ಕೊನೆಯದಾಗಿ ಜಯ ಹೇ.. ಜಯ ಹೇ ಎನ್ನುವ ಉತ್ತಮ ಮಾರ್ಗ ಕಂಡುಕೊಂಡಿದ್ದಾರೆ. ಇದು ಸಮಾಜವಾದಿ ಪಕ್ಷ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೈಡನ್ ನೀವು ನಮಗೆ ದ್ರೋಹ ಮಾಡಿದ್ದೀರಿ: ಶ್ವೇತ ಭವನದ ಮುಂದೆ ಅಫ್ಘಾನ್ ಪ್ರಜೆಗಳ ಪ್ರತಿಭಟನೆ

ABOUT THE AUTHOR

...view details