ಕರ್ನಾಟಕ

karnataka

ETV Bharat / bharat

ಸಿಎಂ ಯೋಗಿಗೆ ಬೆದರಿಕೆ ಹಾಕಿದ್ದ ಎಸ್​ಪಿ ಶಾಸಕನ ಪೆಟ್ರೋಲ್​ ಪಂಪ್​ ನೆಲಸಮ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ ಹಾಕಿದ್ದ ಎಸ್​ಪಿ ಶಾಸಕನ ಪೆಟ್ರೋಲ್​ ಪಂಪ್​ ಅನ್ನು ಸರ್ಕಾರ ಬುಲ್ಡೋಜರ್ ಬಳಸಿ ನೆಲಸಮ ಮಾಡಿದೆ.

SP MLA got Shocked from bulldozer
ಬುಲ್ಡೋಜರ್

By

Published : Apr 8, 2022, 6:05 PM IST

ಬರೇಲಿ(ಉತ್ತರಪ್ರದೇಶ):ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ 'ಬುಲ್ಡೋಜರ್​ ಬಾಬಾ' ಎಂದು ವಿಪಕ್ಷಗಳ ನಾಯಕರಿಂದ ಕರೆಯಲ್ಪಡುತ್ತಾರೆ. ಚುನಾವಣೆಯ ವೇಳೆ ಯೋಗಿ ಅವರನ್ನುದ್ದೇಶಿಸಿ ಎಸ್​ಪಿ ನಾಯಕರು ಬುಲ್ಡೋಜರ್​ ಚಿತ್ರಗಳನ್ನೇ ಬಳಸಿ ಅಪಪ್ರಚಾರ ಮಾಡಿದ್ದರು. ಇದೀಗ ಅದೇ ಬುಲ್ಡೋಜರ್​ ಎಸ್​ಪಿ ಶಾಸಕನೊಬ್ಬನಿಗೆ ಶಾಕ್​ ನೀಡಿದೆ.

ಉತ್ತರಪ್ರದೇಶ ಚುನಾವಣೆಯ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಜೀವ ಬೆದರಿಕೆ ಹಾಕಿದ್ದ ಸಮಾಜವಾದಿ ಪಕ್ಷದ ಶಾಸಕನ ಪೆಟ್ರೋಲ್​ ಪಂಪ್​ ಅನ್ನು 'ಬುಲ್ಡೋಜರ್​' ಬಳಸಿ ಕೆಡವಿ ಹಾಕಲಾಗಿದೆ. ಸರ್ಕಾರದಿಂದ ಅನುಮತಿ ಪಡೆಯದೇ ಪೆಟ್ರೋಲ್​ ಪಂಪ್​ ನಡೆಸುತ್ತಿದ್ದಾನೆ ಎಂಬ ಆರೋಪದ ಮೇಲೆ ಬರೇಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪೆಟ್ರೋಲ್​ ಪಂಪ್​ ಅನ್ನು ನೆಲಸಮ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಯ ಬಳಿಕ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ 100 ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಂಡಿದೆ. ಗೆಲುವಿನ ಉತ್ಸಾಹದಲ್ಲಿದ್ದ ಆ ಪಕ್ಷದ ಶಾಸಕ ಶಾಜಿಲ್​ ಇಸ್ಲಾಂ ಎಂಬುವವರು 'ಇನ್ನು ಮುಂದೆ ಯೋಗಿ ಆದಿತ್ಯನಾಥ್​ ಆಟ ಇಲ್ಲಿ ನಡೆಯಲ್ಲ. ಅವರ ಬಾಯಿಯಿಂದ ಒಂದೇ ಒಂದು ಶಬ್ದ ಬಂದರೆ, ನಮ್ಮ ಬಂದೂಕಿನ ನಳಿಕೆಯಿಂದ ಬರೀ ಹೊಗೆಯಲ್ಲ, ಗುಂಡುಗಳು ಹಾರುತ್ತವೆ' ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಅಲ್ಲದೇ ಇದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇನ್ನು ಪೆಟ್ರೋಲ್​ ಪಂಪ್​ ಅನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳು ಶಾಸಕನಿಗೆ ನೋಟಿಸ್​ ಜಾರಿ ಮಾಡಿದ್ದರು. ಇದಕ್ಕೆ ಉತ್ತರ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುಲ್ಡೋಜರ್​ ಬಳಿಸಿ ಪೆಟ್ರೋಲ್​ ಪಂಪ್​ ಅನ್ನು ಧರಾಶಾಯಿ ಮಾಡಿದ್ದಾರೆ. ಇದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಮೊದಲ ರಾತ್ರಿಯೇ ಅತ್ಯಾಚಾರ ನಡೆದ ಮಾಹಿತಿ ಬಿಚ್ಚಿಟ್ಟ ವಧು: ವರ ಮಾಡಿದ್ದೇನು?

ABOUT THE AUTHOR

...view details