ಲಖನೌ (ಉತ್ತರ ಪ್ರದೇಶ): ವಿವಿಧ ಅಪರಾಧ ಮತ್ತು ಸಿವಿಲ್ ಸೇರಿ 88 ಪ್ರಕರಣಗಳನ್ನು ಎದುರಿಸುತ್ತಿರುವ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಜೈಲಿನಿಂದ ಇಂದು ಬಿಡುಗಡೆಯಾದರು. ನಿನ್ನೆ ಸುಪ್ರೀಂಕೋರ್ಟ್ ಅಜಂ ಖಾನ್ ಬಿಡುಗಡೆಗೊಳಿಸಿ ಆದೇಶ ನೀಡಿತ್ತು.
88 ಪ್ರಕರಣಗಳಲ್ಲಿ ಆರೋಪಿ ಈ ರಾಜಕಾರಣಿ: 27 ತಿಂಗಳ ನಂತರ ಜೈಲಿನಿಂದ ರಿಲೀಸ್
ಮೇ 19ರಂದು ಒಂದು ಲಕ್ಷ ರೂ. ಬಾಂಡ್ ಮೇಲೆ ಅಜಂ ಖಾನ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಆದೇಶ ಪ್ರತಿ ದೊರೆಯದ ಕಾರಣ ಬಿಡುಗಡೆಯಾಗಲು ವಿಳಂಬವಾಗಿತ್ತು.
ಜೈಲಿನಿಂದ ಅಜಂ ಖಾನ್ ರಿಲೀಸ್
27 ತಿಂಗಳಿನಿಂದ ಉತ್ತರ ಪ್ರದೇಶದ ಸೀತಾಪುರ ಜೈಲಿನಲ್ಲಿದ್ದ ಅಜಂ ಖಾನ್ ಬರಮಾಡಿಕೊಳ್ಳಲು ಪ್ರಗತಿಶೀಲ ಸಮಾಜವಾದಿ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಮತ್ತು ಅಜಂ ಖಾನ್ ಪುತ್ರರಾದ ಹಬೀಬ್ ಅಜಂ ಮತ್ತು ಅಬ್ದುಲ್ಲಾ ಅಜಂ ಬಂದಿದ್ದರು.
ಇದನ್ನೂ ಓದಿ:ಲಾಲು ಪ್ರಸಾದ್ ಯಾದವ್ಗೆ ಸಂಬಂಧಿಸಿದ 15 ಸ್ಥಳಗಳ ಮೇಲೆ ಸಿಬಿಐ ದಾಳಿ
Last Updated : May 20, 2022, 12:34 PM IST