ನವದೆಹಲಿ :ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗಸ್ಟ್ 20ರಂದು ಸಂಜೆ 4ಗಂಟೆಗೆ ಸಮಾನ ಮನಸ್ಕ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಇವುಗಳಲ್ಲಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ, ಜಾರ್ಖಂಡ್‌ನ ಹೇಮಂತ್ ಸೊರೆನ್, ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡಿನ ಎಂ ಕೆ ಸ್ಟಾಲಿನ್ ಸೇರಿದಂತೆ ಪ್ರತಿಪಕ್ಷ ನೇತೃತ್ವದ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳು ಸೇರಿದ್ದಾರೆ.
ಈ ಪಕ್ಷಕ್ಕೆ ಆಹ್ವಾನಿಸಲಾದ ಇತರ ವಿರೋಧ ಪಕ್ಷದ ನಾಯಕರಲ್ಲಿ ಎನ್‌ಸಿಪಿಯ ಶರದ್ ಪವಾರ್, ಸಿಪಿಐನ ಡಿ.ರಾಜಾ ಮತ್ತು ಸಿಪಿಐ (ಎಂ)ನ ಸೀತಾರಾಂ ಯೆಚೂರಿ ಸೇರಿದ್ದಾರೆ. ಈ ಬಗ್ಗೆ ಶಿವಸೇನೆ ಸಂಸದ ಸಂಜಯ್ ರಾವುತ್ ಈಟಿವಿ ಭಾರತ್ಗೆ ದೃಢಪಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸೋನಿಯಾ ಗಾಂಧಿಯವರಿಂದ ಆಹ್ವಾನ ಬಂದಿದ್ದು, ಅವರು ವಾಸ್ತವಿಕವಾಗಿ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ವಿವಿಧ ಸಮಸ್ಯೆಗಳನ್ನು ಎತ್ತುತ್ತಿರುವ ವಿರೋಧ ಪಕ್ಷಗಳ ವೇಗ ಉಳಿಸಿಕೊಳ್ಳಲು ಈ ಸಭೆ ಕರೆಯಲಾಗಿದೆ ಎಂದು ಕಾಂಗ್ರೆಸ್ ಆಂತರಿಕ ಮೂಲಗಳು ತಿಳಿಸಿವೆ. ಸಮಾಜವಾದಿ ಪಕ್ಷದಿಂದ ರಾಮ್ ಗೋಪಾಲ್ ಯಾದವ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.