ಕರ್ನಾಟಕ

karnataka

ETV Bharat / bharat

ಆನೆ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡಿದ ವರ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ - Groom ride on elephant

ಫೆ.23 ರಂದು ಗುಜರಾತ್​​ನ ಗಡ್ಡಾದಲ್ಲಿ ನಡೆದ ವಿವಾಹ ಮೆರವಣಿಗೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ವರ ಆನೆಯ ಮೇಲೆ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ.

Groom ride on elephant
ಆನೆಯ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡಿದ ವರ

By

Published : Feb 27, 2023, 2:27 PM IST

ಆನೆಯ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡಿದ ವರ..

ಭಾವನಗರ(ಗುಜರಾತ್​): ತಮ್ಮ ಮದುವೆಯನ್ನು ಸದಾ ಕಾಲ ಸ್ಮರಣೀಯವಾಗಿಸಿಟ್ಟುಕೊಳ್ಳಲು ವಧು - ವರರು ಮದುವೆ ಮಂಟಪಕ್ಕೆ ಬರುವ ವೇಳೆ ಎಲ್ಲ ಹಳೆಯ ಸಂಪ್ರದಾಯಗಳನ್ನು ಮುರಿದು ಬುಲೆಟ್, ಟ್ರ್ಯಾಕ್ಟರ್‌, ಕುದುರೆ, ಹಳೆಯ ವಿಂಟೇಜ್ ಕಾರಿನಲ್ಲಿ ಅಥವಾ ದುಬಾರಿ ಕಾರಿನಲ್ಲಿ ಬರುವುದನ್ನು ನೀವು ನೋಡಿರಬಹುದು. ಹಾಗೇ ಇಲ್ಲೊಂದು ಕಡೆ ವರ ಆನೆಯ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸೌರಾಷ್ಟ್ರದ ಗಡ್ಡಾದಲ್ಲಿ ವರನೊಬ್ಬ ಆನೆಯ ಮೇಲೆ ಕತ್ತಿ ಹಿಡಿದು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಫೆ.23 ರಂದು, ಬೊಟಾಡ್ ಜಿಲ್ಲೆಯ ಗಡ್ಡಾ ಎಂಬಲ್ಲಿ ನಡೆದ ವಿವಾಹದ ಮೆರವಣಿಗೆಯಲ್ಲಿ ವರ ಆನೆಯ ಮೇಲೆ ನೃತ್ಯ ಮಾಡಿದ್ದಾನೆ. ಅಲ್ಲದೇ ವರ ಕಾರಿನ ಮೇಲೆ ನಿಂತು ಹಣ ಎಸೆಯುತ್ತಿರುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿವಾಹದ ಮೆರವಣಿಗೆಯಲ್ಲಿ ಕಾರುಗಳ ಬೆಂಗಾವಲು ಕಂಡು ಬಂದಿದೆ. ಸ್ಥಳೀಯ ನಿವಾಸಿಗಳಿಗೆ ಈ ಮೆರವಣಿಗೆ ಅವಿಸ್ಮರಣೀಯ ಕ್ಷಣದಂತಿತ್ತು. ಹಿಂದೆ ರಾಜರು ಮದುವೆಯಾದಾಗ ಆನೆಯ ಮೇಲೆ ಕುಳಿತು ಮೆರವಣಿಗೆ ನಡೆಸುತ್ತಿದ್ದರು. ಆದರೆ, ಇಂದು ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಕೆಲವು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಯಾವುದೋ ರಾಜನ ಮದುವೆಯ ಮೆರವಣಿಗೆ ಬಂದಂತೆ ಗ್ರಾಮಸ್ಥರಿಗೆ ಭಾಸವಾಯಿತು. ಈ ಆನೆಯ ಸವಾರಿಯ ಹಿಂದೆ ಕಾರುಗಳ ಬೆಂಗಾವಲು ಕೂಡ ಇತ್ತು. ಈ ಮೆರವಣಿಗೆ ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಬಂದಿದ್ದರು. ಗ್ರಾಮದಲ್ಲಿ ಹಿಂದೆಂದೂ ಕಾಣದ ಸಂಭ್ರಮದ ಮದುವೆಯ ವಾತಾವರಣ ಕಂಡು ಬಂತು. ಇದು ಭಾವನಗರದ ರಮೇಶ್ ಭಗವಾನ್‌ಭಾಯಿ ಹವಾಲಿಯಾ ಅವರ ಪುತ್ರ ಕುಲದೀಪ್ ಅವರ ವಿವಾಹವಾಗಿತ್ತು. ಆನೆಯ ಹಿಂದೆ ರಾಜಮನೆತನದ ಕಾರು ಎಂದು ಪರಿಗಣಿಸಲಾಗಿದೆ. ಇಂತಹ ಮೆರವಣಿಗೆಯನ್ನು ಗ್ರಾಮಸ್ಥರು ಎಂದು ನೋಡಿರಲಿಲ್ಲ. ಒಂದು ಕಿ.ಮೀ ಉದ್ದದ ಸರತಿ ಸಾಲಿನಲ್ಲಿ ಜನ ನಿಂತಿದ್ದರು.

ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ: ಇತ್ತೀಚೆಗೆ ಗುಜರಾತ್​ನ ನವಸಾರಿ ಜಿಲ್ಲೆಯ ಚಿಖಲಿ ತಾಲೂಕಿನಲ್ಲಿ ನಡೆದ ವಿವಾಹ ಮೆರವಣಿಗೆಯಲ್ಲಿ ವರ ಜೆಸಿಬಿ ಯಂತ್ರದಲ್ಲಿ ಮೂಲಕ ಮದುವೆ ಮಂಟಪಕ್ಕೆ ಬಂದು ಎಲ್ಲರ ಗಮನ ಸೆಳೆದಿದ್ದ. ಜೆಸಿಬಿ ಯಂತ್ರದಲ್ಲಿ ಬಂದ ಧೋಡಿಯಾ ಪಟೇಲ್ ಸಮುದಾಯದ ಯುವಕ ದುಲ್ಹೇರಾಜ ಅವರನ್ನು ಬುಡಕಟ್ಟು ಸಂಪ್ರದಾಯ ಮತ್ತು ಆಚರಣೆಯಂತೆ ಮದುವೆ ಮಾಡಲಾಗಿತ್ತು. ಸಾಮಾನ್ಯವಾಗಿ ಜೆಸಿಬಿ ಯಂತ್ರವನ್ನು ವಿಧ್ವಂಸಕದಲ್ಲಿ ಬಳಸಲಾಗುತ್ತದೆ. ಇಂತಹ ಮದುವೆ ಮೆರವಣಿಗೆಯನ್ನು ನೋಡಿದ ಜನ ಆಶ್ಚರ್ಯಚಕಿತರಾಗಿದ್ದರು.

ವಿವಾಹದಲ್ಲಿ ವರನ ಕಡೆಯವರು ಜೆಸಿಬಿ ಯಂತ್ರಕ್ಕೆ ಹೂ ಹಾಗೂ ಹಾರಗಳಿಂದ ಅಲಂಕರಿಸಿ ವರನನ್ನು ಬಕೆಟ್​ನಲ್ಲಿ ಕೂರಿಸಿ ಮದುವೆ ಮಂಟಪಕ್ಕೆ ಕರೆ ತಂದಿದ್ದಾರೆ. ಬಳಿಕ ವರನ ಸ್ನೇಹಿತರು ಹೆಗಲ ಮೇಲೆ ಹೊತ್ತುಕೊಂಡು ಮದುವೆ ಮಂಟಪಕ್ಕೆ ಕರೆ ತಂದಿದ್ದಾರೆ. ಈ ವಿಶಿಷ್ಟ ಮದುವೆ ಮೆರವಣಿಗೆ ನೋಡಲು ಸಾವಿರಾರು ಜನರು ನೆರೆದಿದ್ದರು.

ಇದನ್ನೂ ಓದಿ:ಜೆಸಿಬಿ ಏರಿ ಮದುವೆ ಮಂಟಪಕ್ಕೆ ಬಂದ ವರ.. ಗಮನ ಸೆಳೆದ ವಿವಾಹ ಮೆರವಣಿಗೆ

ABOUT THE AUTHOR

...view details