ಕಾನ್ಪುರ (ಉತ್ತರ ಪ್ರದೇಶ) :ಮತ್ತೆ 6 ಝಿಕಾ ವೈರಸ್ ಪ್ರಕರಣಗಳು ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ತೆಯಾಗಿದ್ದು, ರಾಜ್ಯ ಅಥವಾ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಅಕ್ಟೋಬರ್ 23ರಂದು ಕಾನ್ಪುರದಲ್ಲಿ ಐಎಎಫ್ ಅಧಿಕಾರಿಗೆ ಝಿಕಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದು ಉತ್ತರ ಪ್ರದೇಶದ ಮೊದಲ ಕೇಸ್ ಆಗಿತ್ತು. ಆ ಬಳಿಕ ಮೂರು ಪ್ರಕರಣ ವರದಿಯಾಗಿತ್ತು.
ನಿನ್ನೆ ಸಂಜೆ ಕಾನ್ಪುರದ ಚಕೇರಿ ಪ್ರದೇಶದಲ್ಲಿ ವಾಸವಾಗಿರುವ ನಾಲ್ವರು ಮಹಿಳೆ ಮತ್ತು ಇಬ್ಬರು ಪುರುಷರ ವರದಿ ಪಾಸಿಟಿವ್ ಬಂದಿದೆ. ನಾಲ್ವರು ಮಹಿಳೆಯರಲ್ಲಿ ಒಬ್ಬರು ಗರ್ಭಿಣಿಯಾಗಿದ್ದಾರೆ.
ಎಲ್ಲಾ ಆರು ಸೋಂಕಿತರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಸೋಂಕಿತರ ಮನೆಗಳ ಸುತ್ತ ಸುಮಾರು 400 ಮನೆಗಳನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿ ಘೋಷಿಸಲಾಗಿದೆ.
ಚಕೇರಿ ಪ್ರದೇಶದಲ್ಲಿ ಜ್ವರದಿಂದ ಬಳಲುತ್ತಿರುವ 645 ಶಂಕಿತರ ಹಾಗೂ ಗರ್ಭಿಣಿಯರ ರಕ್ತದ ಮಾದರಿಯನ್ನು ವೈದ್ಯಕೀಯ ತಂಡ ಸಂಗ್ರಹಿಸಿದೆ. ಇವರ ಮಾದರಿಗಳನ್ನು ಲಖನೌನ ಕೆಜಿಎಂಯು ಲ್ಯಾಬ್ ಮತ್ತು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಗೆ ಕಳುಹಿಸಲಾಗಿದೆ ಎಂದು ಉತ್ತರ ಪ್ರದೇಶದ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಜಿಎಸ್ ಬಾಜಪೈ ತಿಳಿಸಿದ್ದಾರೆ.
ಇದನ್ನೂ ಓದಿ: ಝಿಕಾ ವೈರಸ್ ಭಯಬೇಡ, ಮುನ್ನೆಚ್ಚರಿಕೆ ಅಗತ್ಯ.. ಇಲ್ಲಿವೆ ಕೆಲ ಉಪಯುಕ್ತ ಸಲಹೆಗಳು..