ತಿರುವನಂತಪುರಂ (ಕೇರಳ): ಸಿಸ್ಟರ್ ಅಭಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಸಿಬಿಐ ವಿಶೇಷ ನ್ಯಾಯಾಲಯ ಅಪರಾಧಿಗಳಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಪ್ರಕರಣದ ಮೊದಲ ಆರೋಪಿ ಥಾಮಸ್ ಕೊಟ್ಟೂರ್‌ಗೆ ಡಬಲ್ ಜೀವಾವಧಿ ಶಿಕ್ಷೆ ಹಾಗು ಮೂರನೇ ಆರೋಪಿ ಸಿಸ್ಟರ್ ಸೆಫಿಗೆ ಜೀವಾವಧಿ ಸಜೆ ವಿಧಿಸಲಾಗಿದೆ.
ಶಿಕ್ಷೆಯ ಜೊತೆಗೆ ಥಾಮಸ್ ಕೊಟ್ಟೂರ್ 6.5 ಲಕ್ಷ ರೂ. ಮತ್ತು ಸಿಸ್ಟರ್ ಸೆಫಿ 5.5 ಲಕ್ಷ ರೂ. ಹಣವನ್ನು ಕೋರ್ಟ್‌ಗೆ ದಂಡವಾಗಿ ಕಟ್ಟಬೇಕಾಗಿದೆ.
ಓದಿ:ಸಿಸ್ಟರ್ ಅಭಯಾ ಕೊಲೆ ಪ್ರಕರಣ: ತೀರ್ಪು ನೀಡಿದ ಸಿಬಿಐನ ವಿಶೇಷ ಕೋರ್ಟ್
ಈ ಪ್ರಕರಣ ಸಂಬಂಧ ನಿನ್ನೆಯಷ್ಟೇ ತೀರ್ಪು ಪ್ರಕಟಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯ, ಫಾ.ಥಾಮಸ್ ಹಾಗು ಸಿಸ್ಟರ್ ಸೆಫಿ ಇಬ್ಬರು ದೋಷಿಗಳೆಂದು ಹೇಳಿತ್ತು.
1992ರ ಮಾರ್ಚ್ 27ರಂದು ಕಾನ್ವೆಂಟ್ ರೂಮ್‌ನಲ್ಲಿ ಸಿಸ್ಟರ್ ಸೆಫಿ ಹಾಗೂ ಥಾಮಸ್ ಎಂ.ಕೊಟ್ಟೂರ್ ಇಬ್ಬರ ನಡುವೆ ನಿಕಟ ಸಂಪರ್ಕವಿದ್ದುದನ್ನು ಆಕಸ್ಮಿಕವಾಗಿ ಅಭಯಾ ನೋಡಿದ್ದರು. ಇದರಿಂದ ಕುಪಿತಗೊಂಡ ಕೊಟ್ಟೂರ್, ಜೋಸ್ ಹಾಗೂ ಸೆಫಿ ಸೇರಿಕೊಂಡು ಅಭಯಾರನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದರು. ಬಳಿಕ ಮೃತದೇಹವನ್ನು ಬಾವಿಗೆ ಎಸೆದಿದ್ದರು. ಸಿಬಿಐ ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ವಿವರವಾದ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣ ಕೇರಳದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.