ದಾದಿಯರು ಮತ್ತು ಶುಶ್ರೂಷಕರ ಕೊರತೆ; ದೇಶಕ್ಕೆ ಎದುರಾದ ಸವಾಲು
ಕಳೆದ ಕೆಲ ಸಮಯದಿಂದ ಪ್ರಕೃತಿ ಮಾನವನಿಗೆ ಸವಾಲಿನ ಮೇಲೆ ಸವಾಲ್ ಒಡ್ಡುತ್ತಿದೆ. ಕೊರೊನಾ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಇದರ ನಡುವೆ ಇದೀಗ ತರಬೇತಿ ಪಡೆದ ದಾದಿಯರು ಮತ್ತು ಶುಶ್ರೂಷಕರ ಕೊರತೆ ದೇಶಕ್ಕೆ ಸವಾಲಾಗಿದೆ.
ದಾದಿಯರು ಮತ್ತು ಶುಶ್ರೂಷಕರ ಕೊರತೆ; ದೇಶಕ್ಕೆ ಎದುರಾದ ಸವಾಲು
By
Published : Feb 14, 2021, 3:46 PM IST
ನವದೆಹಲಿ: ಭಾರತೀಯ ನರ್ಸಿಂಗ್ ಕೌನ್ಸಿಲ್ (ಐಎನ್‌ಸಿ) ದಾಖಲೆಗಳ ಪ್ರಕಾರ, ದೇಶದಲ್ಲಿ ಸುಮಾರು 22,72,208 ನೋಂದಾಯಿತ ದಾದಿಯರು ಮತ್ತು ನೋಂದಾಯಿತ ಶುಶ್ರೂಷಕಿಯರು (ಆರ್‌ಎನ್ ಮತ್ತು ಆರ್‌ಎಂ) ಮತ್ತು 9,91,425 ನರ್ಸ್ ಅಸೋಸಿಯೇಟ್ಸ್ (9,34,583-ಸಹಾಯಕ ನರ್ಸ್ ಶುಶ್ರೂಷಕಿಯರು ಮತ್ತು 56,842-ಲೇಡಿ ಆರೋಗ್ಯ ಸಂದರ್ಶಕರು) ದೇಶದಲ್ಲಿದ್ದಾರೆ. ಅದಾಗ್ಯೂ ತರಬೇತಿ ಪಡೆದ ದಾದಿಯರು ಮತ್ತು ಶುಶ್ರೂಷಕರ ಕೊರತೆ ದೇಶಕ್ಕೆ ಸವಾಲಾಗಿದೆ.
ದೇಶದ ಸುಮಾರು 5,085 ನರ್ಸಿಂಗ್ ಸಂಸ್ಥೆಗಳು ವಾರ್ಷಿಕವಾಗಿ ಸುಮಾರು 3.35 ಲಕ್ಷ ಶುಶ್ರೂಷಕ ಸಿಬ್ಬಂದಿಯನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದೆ. ದೇಶದಲ್ಲಿ ಪ್ರಸ್ತುತ ನರ್ಸ್-ಜನಸಂಖ್ಯಾ ಅನುಪಾತವು 1000 ಜನಸಂಖ್ಯೆಗೆ 1.79 ದಾದಿಯರು ಇದ್ದಾರೆ. ಆದಾಗ್ಯೂ ಈ ಅನುಪಾತವು ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತದೆ.
ಅಕ್ಟೋಬರ್ 31, 2020 ರವರೆಗಿನ ನರ್ಸಿಂಗ್ ಸಂಸ್ಥೆಗಳ ಮಾಹಿತಿ: