(ಶೋಪಿಯಾನ್) ಜಮ್ಮು- ಕಾಶ್ಮೀರ:ರಾವಲ್ಪೋರಾ ಪ್ರದೇಶದಲ್ಲಿ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಭದ್ರತಾ ಪಡೆ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ರಾವಲ್ಪೋರಾ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಒಬ್ಬ ಭಯೋತ್ಪಾದಕನ್ನು ಸೇನೆ ಸದೆ ಬಡಿದಿದೆ. ನಿನ್ನೆ ಕತ್ತಲೆಯಾದ ಕಾರಣ ಎನ್ಕೌಂಟರ್ ಕಾರ್ಯಾಚರಣೆಯನ್ನು ಬೆಳಗ್ಗೆಗೆ ಮುಂದೂಡಲಾಗಿತ್ತು.