ಕರ್ನಾಟಕ

karnataka

ETV Bharat / bharat

ಶ್ರೀನಗರದಲ್ಲಿ 'ನಿಗೂಢ ಸ್ಫೋಟ'ಕ್ಕೆ ಅಂಗಡಿ ಉಡೀಸ್​.. ಉಗ್ರರಿಂದ ಗ್ರೆನೇಡ್​ ದಾಳಿ ಶಂಕೆ - ಶ್ರೀನಗರ ಸ್ಫೋಟಕ್ಕೆ ಅಂಗಡಿ ಧ್ವಂಸ

ಶ್ರೀನಗರದ ಖವಾಜಾ ಬಜಾರ್​ನಲ್ಲಿ ನಿಗೂಢ ಸ್ಫೋಟದಿಂದಾಗಿ ಅಂಗಡಿಯೊಂದಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಪೊಲೀಸ್​ ತಂಡ ಆಗಮಿಸಿ ಗ್ರೆನೇಡ್​ ದಾಳಿ ನಡೆದಿದೆಯಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ..

mysterious' blast
ನಿಗೂಢ ಸ್ಫೋಟ

By

Published : Feb 18, 2022, 3:32 PM IST

ಶ್ರೀನಗರ (ಜಮ್ಮು-ಕಾಶ್ಮೀರ) :ಶ್ರೀನಗರದ ಖವಾಜಾ ಬಜಾರ್ ಪ್ರದೇಶದಲ್ಲಿ ನಿಗೂಢ ಸ್ಫೋಟಕ್ಕೆ ಅಂಗಡಿಯೊಂದು ಹಾನಿಯಾದ ಘಟನೆ ನಡೆದಿದೆ. ಇದು ಪಾಕಿಸ್ತಾನ ಸೇನೆ ಅಥವಾ ಉಗ್ರಗಾಮಿಗಳು ನಡೆಸಿದ ಗ್ರೆನೇಡ್​ ದಾಳಿಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಶ್ರೀನಗರದಲ್ಲಿ ಭಾರತೀಯ ಸೇನಾಪಡೆಗಳು ಉಗ್ರರನ್ನ ಮಟ್ಟ ಹಾಕುತ್ತಿರುವ ಹಿನ್ನೆಲೆ ಸಿಆರ್​ಪಿಎಫ್​ ಯೋಧರ ನೆಲೆಯ ಮೇಲೆ ಗ್ರೆನೇಡ್​ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ.

ಆದರೆ, ಈ ಬಗ್ಗೆ 'ಈಟಿವಿ ಭಾರತ್'​ ಜೊತೆ ಮಾತನಾಡಿರುವ ಶ್ರೀನಗರ ಎಸ್‌ಎಸ್‌ಪಿ ರಾಕೇಶ್ ಬಲ್ವಾಲ್, ಇದು ಗ್ರೆನೇಡ್ ದಾಳಿಯಲ್ಲ. ಆದರೆ, ನಿಗೂಢ ಸ್ಫೋಟವಾಗಿದೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಘಟನೆಯಲ್ಲಿ ಅಂಗಡಿಯೊಂದಕ್ಕೆ ಹಾನಿಯಾಗಿದೆ. ಇದುವರೆಗೆ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು. ಸ್ಫೋಟದ ಸ್ಥಳಕ್ಕೆ ಪೊಲೀಸ್ ತಂಡ ಆಗಮಿಸಿದ್ದು, ಗ್ರೆನೇಡ್​ ದಾಳಿ ನಡೆದಿದೆಯಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಓದಿ:ಆಸ್ಪತ್ರೆಗಾಗಿ ಟಿಟಿಡಿ ದೇಣಿಗೆ ಸಂಗ್ರಹ.. ಮೊದಲ ದಿನವೇ 85 ಕೋಟಿ ರೂ. ಹಣ ನೀಡಿದ ಭಕ್ತರು

ABOUT THE AUTHOR

...view details