ಪಲಾಮು(ಜಾರ್ಖಂಡ್): ಕೇವಲ 10 ರೂಪಾಯಿಗೋಸ್ಕರ ಚೈನ್‌ಪುರ ಶೂಟೌಟ್ ನಡೆದಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಜಾರ್ಖಂಡ್ನ ಪಲಾಮು ಎಂಬಲ್ಲಿ ನಡೆದಿದೆ. ಶುಕ್ರವಾರ ಸಂಜೆ ಚೈನ್‌ಪುರ ಮಾರುಕಟ್ಟೆಯಲ್ಲಿರುವ ಮದ್ಯದಂಗಡಿಯಲ್ಲಿ ಪರಸ್ಪರ ವಾಗ್ವಾದದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ರಾಜು ಆರ್ಯ ಎಂಬುವವರಿಗೆ ತಲೆಗೆ ಗುಂಡು ತಗಲಿದೆ. ಇವರ ಜೊತೆ ಸಂಬಂಧಿ ರಂಜಿತ್ ಆರ್ಯ ಎಂಬುವವರಿಗೂ ಕೂಡ ಹೊಟ್ಟೆಗೆ ಎರಡು ಗುಂಡುಗಳು ತಗುಲಿವೆ. ಈ ಪ್ರಕರಣಕ್ಕೆ ಜಾರ್ಖಂಡ್ ಪೊಲೀಸರು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಪೊಲೀಸರಿಗೆ ಹಲವು ಮಹತ್ವದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಚೈನ್‌ಪುರ ಪೊಲೀಸ್ ಠಾಣೆ ಪ್ರಭಾರಿ ಉದಯ್ ಕುಮಾರ್ ಗುಪ್ತಾ ಮಾತನಾಡಿ, ಪ್ರಕರಣದ ಆರೋಪಿಗಳನ್ನು ಬಂಧಿಸಲು ಪೊಲೀಸರು ಹಲವು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದೇವೆ ಎಂದಿದ್ದಾರೆ.
ಮುದ್ರಣ ದರಕ್ಕಿಂತ 10 ರೂಪಾಯಿ ಹೆಚ್ಚಿಗೆ ಬೇಡಿಕೆ ಇಟ್ಟಿದ್ದಕ್ಕೆ ಶುರುವಾದ ವಿವಾದ:ಇಡೀ ಘಟನೆ ನಡೆದಿರುವುದು ಕೇವಲ 10 ರೂಪಾಯಿಗಾಗಿ, ಸೋನು ಎಂಬ ಯುವಕ ಚೈನ್‌ಪುರ ಮಾರುಕಟ್ಟೆಗೆ ಮದ್ಯ ಖರೀದಿಸಲು ತೆರಳಿದ್ದ, ಸೋನು ಮತ್ತು ಆತನ ಸ್ನೇಹಿತರು ಖರೀದಿಸಿದ್ದ ಮದ್ಯದ ಪ್ರಿಂಟ್ ದರ 170 ರೂ. ಆದರೆ, ಮಧ್ಯದ ಅಂಗಡಿಯ ಸೇಲ್ಸ್ ಮ್ಯಾನ್ 180 ರೂಗೆ ಮಾರಾಟ ಮಾಡಿದ್ದ, ಸೋನು ಅವರು ಸೇಲ್ಸ್ ಮ್ಯಾನ್ ಜೊತೆ ಪ್ರಿಂಟ್ ರೇಟ್ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು.
ವಿವಾದದ ಮಧ್ಯೆ ರಾಜು ಆರ್ಯ ಮತ್ತು ರಂಜಿತ್ ಆರ್ಯ ಸೋನುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಸೋನು ಮನೆಗೆ ಹೋಗಿ ತನ್ನ ಸ್ನೇಹಿತರೊಂದಿಗೆ ಗನ್ ತರಲು ತೆರಳಿದ್ದಾನೆ. ವಾಪಸ್ ಬಂದ ಸೋನು, ರಾಜು ಆರ್ಯ ಮತ್ತು ರಂಜಿತ್ ಆರ್ಯ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ರಾಜು ಆರ್ಯ ಅವರ ತಲೆಗೆ ಗುಂಡು ತಗುಲಿದೆ. ರಂಜಿತಾ ಆರ್ಯ ಅವರ ಹೊಟ್ಟೆಗೆ ಗುಂಡು ಹೊಕ್ಕಿದೆ. ಇಬ್ಬರಿಗೂ ಗುಂಡು ಹಾರಿಸಿ ಸೋನು ಮತ್ತು ಅವರ ಸ್ನೇಹಿತರು ಗಾಳಿಯಲ್ಲಿ ಗುಂಡು ಹಾರಿಸಿ ಬಾರ್ನಿಂದ ಪರಾರಿಯಾದರು.