ಅಮೃತಸರ( ಪಂಜಾಬ್): ಗ್ಯಾಂಗ್ಸ್ಟರ್ ಒಬ್ಬ ಇಸ್ಲಾಮಾಬಾದ್ ರೈಲ್ವೆ ಟ್ರ್ಯಾಕ್ ಮೇಲೆ ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ. ಗ್ಯಾಂಗ್ಸ್ಟಾರ್ ಸೋನು ಸಿಲಿಂಡರ್ ಈ ಕೃತ್ಯ ಎಸಗಿದ್ದಾನೆ ಎಂದು ಮೃತನ ಕುಟುಂಬ ಆರೋಪಿಸಿದೆ.
ನಿನ್ನೆ ಸಂಜೆ ವೇಳೆ ಇಸ್ಲಾಮಾಬಾದ್ ರೈಲ್ವೆ ಟ್ರ್ಯಾಕ್ ಬಳಿ ಇಬ್ಬರು ಯುವಕರು ನಿಂತಿದ್ದರು. ಈ ವೇಳೆ ಆರೋಪಿ ಸೋನು ಸಿಲಿಂಡರ್ ಏಕಾಏಕಿ ಯುವಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮನಿಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.