ವಾರ್ಧಾ(ಮಹಾರಾಷ್ಟ್ರ):ಬರೋಬ್ಬರಿ ಎರಡು ಗಂಟೆಗಳ ಕಾಲ ಬಾಲಕಿ ಕುತ್ತಿಗೆಗೆ ಸುತ್ತಿಕೊಂಡಿದ್ದ ವಿಷಕಾರಿ ಹಾವೊಂದು ಕೊನೆ ಕ್ಷಣದಲ್ಲಿ ಆಕೆಗೆ ಕಚ್ಚಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 7 ವರ್ಷದ ದಿವ್ಯಾ ಎಂಬ ಬಾಲಕಿಹಾವಿನಿಂದ ಕಚ್ಚಿಸಿಕೊಂಡಿದ್ದಾಳೆ.
ಬಾಲಕಿ ಮಲಗಿದ್ದ ಸಂಧರ್ಭದಲ್ಲಿ ಅಲ್ಲಿಗೆ ಬಂದಿರುವ ಹಾವು, ಬಾಲಕಿ ಕೊರಳಿಗೆ ಸುತ್ತಿಕೊಂಡಿದೆ. ಈ ವೇಳೆ ಎಚ್ಚರಗೊಂಡಿರುವ ಬಾಲಕಿ ಪೋಷಕರಿಗೆ ಏನು ಮಾಡಬೇಕು ಎಂಬುದು ಗೊತ್ತಾಗಿಲ್ಲ. ತಕ್ಷಣವೇ ಉರಗತಜ್ಞನಿಗೆ ಫೋನ್ ಮಾಡಿದ್ದಾರೆ.
ಆದರೆ, ಹಾವು ಬಾಲಕಿಯ ಕುತ್ತಿಗೆ ಭಾಗಕ್ಕೆ ಸುತ್ತಿಕೊಂಡಿರುವ ಕಾರಣ ಆತ ಕೂಡ ಅಸಹಾಯಕನಾಗಿದ್ದಾನೆ. ಈ ವೇಳೆ ಮಾಹಿತಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ್ದು, ಅಲ್ಲಿಗೆ ಆಗಮಿಸಿ ಘಟನೆಯ ವಿಡಿಯೋ ಮಾಡಿದ್ದಾರೆ.